Items
0
Total
  0.00 
Welcome Guest.

 
ಜೀವಜಗತ್ತಿನ ಕೌತುಕಗಳು - ಉಸಿರಾಟ
ಲೇಖಕರು: ಲೀಲಾ ಎನ್ ಎಸ್, Leela N S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ನೀಡುವ ೨೦೧೪ - ೧೫ ನೇ ಸಾಲಿನ ರಾಜ್ಯಮಟ್ಟದ‘ಶ್ರೇಷ್ಠ ಲೇಖಕ ಪ್ರಶಸ್ತಿ‘
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/4 Crown Size
ISBN : 9788184674484
ಕೋಡ್ : 002323

ಉಸಿರಾಟ - ಇದು ಜೀವಂತಿಕೆಗೆ ಸಾಕ್ಷಿಯಾದ ದೇಹದಲ್ಲಿನ ಕ್ರಿಯೆ. ಜೀವನಪರ್ಯಂತ ನಿರಂತರ. ನಮ್ಮಲ್ಲಿ ಪಂಚ ಭೌತಿಕಗಳ ಕಲ್ಪನೆಯಿದೆ. ನೀರು-ಗಾಳಿ-ಮಣ್ಣು-ಆಕಾಶ-ಅಗ್ನಿಗಳ ತತ್ವಾಧಾರಿತ ದೇಹ ನಮ್ಮದು. ಹಾಗಾಗಿ ಭೂಮಿಯಲ್ಲಿನ ಜೀವಿಗಳಿಗೆಲ್ಲ ಸಂಚಲನವಿದ್ದೇ ಇದೆ. ಉಸಿರಾಡಲು ನಮಗೆ ಶುದ್ಧಗಾಳಿ ಬೇಕು. ಶ್ವಾಸಕೋಶ ಎಂಬ ಅಂಗವು ನಮ್ಮ ಉಸಿರಾಟದ ವ್ಯವಸ್ಥೆಯಲ್ಲಿ ನೇರ ಭಾಗಿಯಾಗುತ್ತದೆ. ಆದರೆ ಜೀವಿ ವೈವಿಧ್ಯಗಳಿರುವ ಜಗತ್ತಿನಲ್ಲಿ ಉಸಿರಾಟದ ವ್ಯವಸ್ಥೆಯು ಒಂದೇ ರೀತಿಯಾಗಿರುವುದಿಲ್ಲ. ಆಮ್ಲಜನಕವಿಲ್ಲದೆಯೂ ಕೆಲವೊಂದು ಜೀವಿಗಳು ಉಸಿರಾಡಬಲ್ಲವು. ಜಲಚರಗಳು ನೀರಿನಲ್ಲಿದ್ದೇ ಉಸಿರಾಡಬಲ್ಲವು. ಭೂಮಿಯ ಮೇಲೆ ಜೀವಿಸುವ ಲಕ್ಷಾಂತರ ಜೀವಜಂತುಗಳು ಉಸಿರಾಡುವ ಕ್ರಿಯೆಯೂ ಭಿನ್ನ. ಉಸಿರಾಟದ ಅಂಗಗಳನ್ನು ತಮ್ಮ ಅನುಕೂಲಕ್ಕೆ ಮತ್ತು ವಾತಾವರಣಕ್ಕೆ ಮಾರ್ಪಡಿಸಿಕೊಂಡು ನಿಗೂಢತೆಗೆ ಸಾಕ್ಷಿಯಾಗಬಲ್ಲ ಹಲವಾರು ಉದಾಹರಣೆಗಳಿವೆ. ವಿಜ್ಞಾನಕ್ಷೇತ್ರದಲ್ಲಿ ಉಸಿರಾಟದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ವೈದ್ಯಕೀಯ ಕ್ಷೇತ್ರ ಎಷ್ಟು ಮುಂದುವರಿದಿದೆಯೆಂದರೆ ಕೃತಕ ಉಸಿರಾಟದ ವ್ಯವಸ್ಥೆಯಿಂದ ಅಪಾಯದ ಅಂಚಿನಲ್ಲಿರುವ ರೋಗಿಯನ್ನು ಬದುಕಿಸಲೂ ಶಕ್ತವಾಗಿದೆ. ಈ ಎಲ್ಲ ಹಿನ್ನೆಲೆಗೂ ಕಾರಣಕರ್ತರಾದ ವಿಜ್ಞಾನಿಗಳ ಪರಿಚಯವೂ ಈ ಪುಸ್ತಕದಲ್ಲಿದೆ.

ಡಾ|| ಎನ್ ಎಸ್ ಲೀಲಾ, ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಇವರ ಜನಪ್ರಿಯ ವಿಜ್ಞಾನ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಹಲವಾರು ಕೃತಿಗಳನ್ನು ನವಕರ್ನಾಟಕ ಪಬ್ಲಿಕೇಷನ್ಸ್, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾಲಯ, ಸಪ್ನ ಮತ್ತು ಪ್ರಿಸಂ ಬುಕ್ ಹೌಸ್ ಪ್ರಕಟಿಸಿವೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜ್ಞಾನವಾಣಿ ಮತ್ತು ಆಕಾಶವಾಣಿಗಳಲ್ಲಿ ಇವರ ಭಾಷಣ ಬಿತ್ತರಗೊಂಡಿವೆ. ಅಧ್ಯಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ೨೦೦೨ನೇ ಸಾಲಿನ ‘ಸದೋದಿತ’ ಪ್ರಶಸ್ತಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟಿನ ‘ಶಾಶ್ವತಿ’ಯಿಂದ ಇವರಿಗೆ ದೊರೆತಿದೆ. ಜವಹರಲಾಲ್ ನೆಹರು ಸೆಂಟರ್ ಫಾರ್ ಎಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯ ೨೦೦೫ರ ‘ಅನುಪಮ ವಿಜ್ಞಾನ ಶಿಕ್ಷಕಿ’ ಪ್ರಶಸ್ತಿಯ ಭಾಜನರು. ಕರ್ನಾಟಕ ಸ್ಟೇಟ್ ವುಮೆನ್ ಎಕ್ಸಲೆನ್ಸ್ ಅವಾರ್ಡ್, ವಿಮೆನ್ ಇಂಟರ್ ನ್ಯಾಷನಲ್ ನೆಟ್‌ವರ್ಕ್ ವತಿಯಿಂದ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ ೨೦೧೧. ಪ್ರಸ್ತುತ ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಷನ್ ಸಲಹೆಗಾರರು ಹಾಗೂ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನ ಎಥಿಕಲ್ ಕಮಿಟಿ ಸದಸ್ಯರಾಗಿದ್ದಾರೆ.

ಲೇಖಕರ ಇತರ ಕೃತಿಗಳು
10%
ಜೀವಿ ವೈವಿಧ್ಯ ಮತ್ತು ....
ಲೀಲಾ ಎನ್ ಎಸ್, Leela N S
Rs. 70    Rs. 63
10%
ಜೀವಜಗತ್ತಿನ ಕೌತುಕಗಳು - ....
ಲೀಲಾ ಎನ್ ಎಸ್, Leela N S
Rs. 80    Rs. 72
10%
ಜೀವಾವಾಸಗಳು ನೆಲೆಸು - ....
ಲೀಲಾ ಎನ್ ಎಸ್, Leela N S
Rs. 75    Rs. 68
10%
ನೀರು (ವಿಜ್ಞಾನ ಸರಳ ....
ಲೀಲಾ ಎನ್ ಎಸ್, Leela N S
Rs. 90    Rs. 81
Best Sellers
ಕನ್ನಡ ಸಾಹಿತ್ಯ : ಚಾರಿತ್ರಿಕ ಬೆಳವಣಿಗೆ. ಸಂಪುಟ - ೨
ವೀರಣ್ಣ ಸಿ, Veeranna C
Rs. 315/-   Rs. 350
ನಾಲ್ಕನೇ ಆಯಾಮ ಎಲ್ಲಿದೆ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 99/-   Rs. 110
ಸ್ವಾತಂತ್ರ್ಯದ ಹೋರಾಟ
ಬಿಪಿನ್ ಚಂದ್ರ, Bipin Chandra
Rs. 72/-   Rs. 80
Mathematics Can Be Fun
Perelman Y
Rs. 315/-   Rs. 350

Latest Books
ಹೆತ್ತೂರು : ಬಾಲ್ಯದ ಅನುಭವ ಕಥನ
ಜಾಣಗೆರೆ ವೆಂಕಟರಾಮಯ್ಯ, Janagere Venkataramaiah
Rs. 135/-   Rs. 150
ಬೊಜ್ಜಿಗಿದೆ ಪರಿಹಾರ (ಬೊಜ್ಜು ಕರಗಿಸಲು ಸಜ್ಜಾಗೋಣ)
ವೀಣಾ ಎಸ್ ಭಟ್, Veena S Bhat
Rs. 99/-   Rs. 110
ಚರ್ಚಿತ ವಿದೇಶಿ ಕ್ಲಾಸಿಕ್ ಮತ್ತು ವ್ಯಂಗ್ಯ ಕಥೆಗಳು
ಶ್ರೀನಾಥ್ ಡಿ ಎನ್, Srinath D N
Rs. 135/-   Rs. 150
ವಸ್ತರೆ : ಇನ್ನೂ 75
ನಾಗರಾಜ ರಾಮಸ್ವಾಮಿ ವಸ್ತರೆ, Nagaraja Ramaswamy Vastar
Rs. 180/-   Rs. 200


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.