Items
0
Total
  0.00 
Welcome Guest.

 
ಜಯಂತ ಕಾಯ್ಕಿಣಿಯವರ ಕಥನಾವರಣ
ಲೇಖಕರು: ಮಮತಾ ರಾವ್, Mamata Rao

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 150
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 184
ಪುಸ್ತಕದ ಗಾತ್ರ : 1/8 Demy Size
ಕೋಡ್ : 189391

ಕೃತಿವಿಮರ್ಶೆಯೆಂದರೆ ಕೃತಿಯನ್ನು ಅರಿಯುವ ಬಗೆ; ಲೇಖಕನು ಸೃಷ್ಟಿಸಿದ ಜಗತ್ತಿನ ಜೊತೆ ಸಂಬಂಧ ಬೆಳೆಸುವ ಬಗೆ. ಅಲ್ಲಿ ಕೊನೆಯ ಮಾತೆಂಬುದಿರುವುದಿಲ್ಲ. ವಿಮರ್ಶೆಯ ವಿನಯವೆಂದರೆ ಭೋಳೆಯಾಗಿ ಹೊಗಳುವುದಲ್ಲ; ತನಗೆ ಕಂಡದ್ದಕ್ಕಿಂತಲೂ ಮಿಗಿಲಾದ್ದು ಇರಬಹುದೆನ್ನುವ ಸಾಧ್ಯತೆಯನ್ನು ಗುರುತಿಸುವುದು. ಜಯಂತ ಕಾಯ್ಕಿಣಿಯವರ ಕಥನಲೋಕವನ್ನು ಮಮತಾ ರಾವ್ ಅನ್ವೇಷಿಸುವ ಬಗೆ ಈ ರೀತಿಯದು. ಆದ್ದರಿಂದ ಇದು ಆಪ್ತವಾಗುವ ಬರವಣಿಗೆ, ಓದುಗರನ್ನು ಜೊತೆಗೆ ಕರೆದುಕೊಂಡು ಹೋಗುವ, ಜಂಟಿ ಕಾರ್ಯಾಚರಣೆ!

ಭಾಷೆ, ಸಂವೇದನೆ ಮತ್ತು ವಸ್ತುವಿನ ಆಯ್ಕೆಯಲ್ಲಿ ಅತ್ಯಂತ ವಿಶಿಷ್ಟವಾಗಿರುವ ಜಯಂತರ ಕಥನಲೋಕದ ವಿಸ್ತಾರ ದೊಡ್ಡದು. ಯಾವ ಖಾನೆಗಳಲ್ಲಿ ಕೂರಿಸಿದರೂ ಅದು ನುಸುಳಿಹೋಗುತ್ತದೆ. ಜಯಂತ ಸೃಷ್ಟಿಸಿದ ಇಂಥ ಸಂಕೀರ್ಣ ಪ್ರಪಂಚವನ್ನು ನಾನಾ ಮಗ್ಗಲುಗಳಿಂದ, ಹಲವು ಉಪಾಯಗಳಿಂದ, ಪಾತ್ರ-ಸನ್ನಿವೇಶಗಳ ಕೋನದಿಂದ, ಮುಂಬೈ-ಗೋಕರ್ಣದ ಹಿನ್ನೆಲೆಯ ಮುಖೇನ ಪಡೆಯಲು ಮಮತಾ ಪ್ರಯತ್ನಿಸಿದ್ದಾರೆ. ಹೀಗೆ ಹುಡುಕುತ್ತ, ಹೊಸದಾಗಿ ಕಂಡದ್ದರ ಬಗ್ಗೆ ಬೆರಗು ಪಡುತ್ತ, ತಾವು ಕಂಡದ್ದನ್ನು ನಮಗೂ ಕಾಣಿಸಬೇಕೆನ್ನುವ ಸಹೃದಯತೆಯ ನಿಲುವಿನಲ್ಲಿ ಈ ಕೃತಿ ಹುಟ್ಟಿಕೊಂಡಿದೆ. ಇದೆಲ್ಲದರ ಜೊತೆಗೆ ಜಯಂತರೊಡನೆಯ ಸಂದರ್ಶನವು ಈ ಲೇಖಕನ ಜಗತ್ತಿನ ಕುರಿತು ಹಲವು ಸೂಕ್ಷ್ಮ ಗ್ರಹಿಕೆಗಳನ್ನು ಒದಗಿಸುತ್ತದೆ. ಓದುಗ, ಲೇಖಕ, ವಿಮರ್ಶಕ ಈ ತ್ರಿಕೋನ ಸಂಬಂಧವನ್ನು ಧ್ವನಿಪೂರ್ಣವಾಗಿ ಮೀಟಿರುವುದು ಇಲ್ಲಿಯ ಸಾಧನೆ.

Best Sellers
ದೇವದತ್ತ ಪಟ್ಟನಾಯಕ ಜಯ ಮಹಾಭಾರತದ ಸಚಿತ್ರ ಮರುಕಥನ
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 450/-   Rs. 500
ಸಚಿತ್ರ ಜ್ಞಾನ ಸಂಪದ
ಮುರಳಿ ಮೋಹನ್ ಹೆಚ್ ಆರ್, Murali Mohan H R
Rs. 140/-   Rs. 175
ನೈಸರ್ಗಿಕ ಸಂಪನ್ಮೂಲಗಳು (ವಿಜ್ಞಾನ ಸರಳ ಪರಿಚಯ)
ಕೃಷ್ಣಮೂರ್ತಿ ಎಚ್ ಆರ್, Krishnamurthy H R
Rs. 59/-   Rs. 65
ದೇವನೂರ ಮಹಾದೇವ ಅವರ ಆಯ್ದ ಕಥೆಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75

Latest Books
ನೀರ ದಾರಿ : ದಲಿತ ಮಹಿಳಾ ಪ್ರಜ್ಞೆ - ವಿಭಿನ್ನ ನೆಲೆಗಳಿಂದ
ಸರಸ್ವತಿ ದು, Saraswati Du
Rs. 360/-   Rs. 400
ಕನಕದಾಸರು (ಜೀವನ್-ಸಾಧನ-ದರ್ಶನ-ಕೀರ್ತನೆಗಳು)
ಅರಳುಮಲ್ಲಿಗೆ ಪಾರ್ಥಸಾರಥಿ, Aralumallige Parthasarathy
Rs. 225/-   Rs. 250
ಕೋವೂರ್ ಕಂಡ ವೈಜ್ಞಾನಿಕ ಸತ್ಯ
ಅಬ್ರಾಹಂ ಟಿ ಕೋವೂರ್ , Abraham T Kovoor
Rs. 144/-   Rs. 160
ನೀಲಿ ಮೂಗಿನ ನತ್ತು
ಹೆಚ್. ಆರ್. ಸುಜಾತಾ, H R Sujatha
Rs. 171/-   Rs. 190


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.