|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮೂಲದಲ್ಲಿ ಜಯ ಎಂದು ಹೆಸರು ಹೊಂದಿದ್ದ ಭಾರತದೇಶದ ಮಹಾನ್ಕಾವ್ಯವಾದ ಮಹಾಭಾರತದ ಈ ಮರುಕಥನದಲ್ಲಿ ದೇವದತ್ತ ಪಟ್ಟನಾಯಕರು ಸಂಸ್ಕøತದ ಅಭಿಜಾತ ಕೃತಿಯಾದ ವ್ಯಾಸಭಾರತದ ಜೊತೆಗೆ, ಛತ್ತೀಸಗಢದ ಪಾಂಡವಾನಿ, ಮಹಾರಾಷ್ಟ್ರದ ಗೋಂಧಳೆ, ತಮಿಳುನಾಡಿನ ತೆರುಕ್ಕೊತ್ತು, ಕರ್ನಾಟಕದ ಯಕ್ಷಗಾನಗಳನ್ನು ಒಳಗೊಂಡು ಮಹಾಭಾರತದ ಅನೇಕ ಮೌಖಿಕ ಮತ್ತು ಪ್ರಾದೇಶಿಕ ಕಥಾಂತರಗಳನ್ನು ಒಳಗೊಂಡು ಮಹಾಭಾರತದ ಅನೇಕ ಮೌಲಿಕ ಮತ್ತು ಪ್ರಾದೇಶಿಕ ಕಥಾಂತರಗಳನ್ನು ಒಂದೇ ಕಥಾಸಂವಿಧಾನದಲ್ಲಿ ಹೊಲಿಗೆ ಕಾಣದಂತೆ ನೇಯ್ದಿದ್ದಾರೆ.
ಸ್ವತಃ ಪಟ್ಟನಾಯಕರೇ ರಚಿಸಿರುವ 250ಕ್ಕೂ ಹೆಚ್ಚಿನ ರೇಖಾಚಿತ್ರಗಳಿಂದ ಶ್ರೀಮಂತವಾಗಿರುವ ಈ ಗ್ರಂಥದ 108 ಅಧ್ಯಾಯಗಳು ಕೌರವರ ನೂರು ಹೆಸರುಗಳು, ದ್ರೌಪದಿಯನ್ನು ದೇವತೆ ಎಂದು ಪೂಜಿಸುವ ತಮಿಳುನಾಡಿನ ಆರಾಧನೆ, ಆಸ್ತಿಕ, ಮಾಧವಿ, ಜೈಮಿನಿ, ಇರಾವಂತ, ಬರ್ಬರೀಕ ಕಥೆಗಳು, `ಶಾಕುಂತಲ` ಮತ್ತು ರಾಮಾಯಣಗಳ ಮಹಾಭಾರತದ ಮೂಲ ರೂಪಗಳು, ಖಗೋಳ ವಿಜ್ಞಾನದ ಆಧಾರದ ಮೇಲೆ ನಿರ್ಧರಿಸಿರುವ ಮಹಾಭಾರತದ ಯುದ್ಧದ ಕಾಲನಿರ್ಣಯ ಮೊದಲಾದ ಅನೇಕ ಅಪರಿಚಿತ ವಿವರಗಳಿಂದ ಸಮೃದ್ಧವಾಗಿದೆ.
ಈ ಆಕರ್ಷಕ ಸಂಪುಟದಲ್ಲಿ ಸೇರಿರುವ ಕಥೆಗಳು ಮಹಾಭಾರತದ ಸರ್ವಕಾಲೀನ ಪ್ರಸ್ತುತತೆಯನ್ನು, ಮೂರು ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲ ಭಾರತದ ವೈಚಾರಿಕತೆಯನ್ನು ರೂಪಿಸಿರುವ ಮನುಷ್ಯನ ಅವಸ್ಥೆಯನ್ನು ಕುರಿತ ಸಂಕೀರ್ಣ ಮತ್ತು ಅಸ್ವಸ್ಥ ಗೊಳಿಸುವ ಚಿಂತನೆಯನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ನಿರೂಪಿಸುತ್ತವೆ.
|
| | |
|
|
|
|
|
|
|
|