|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಜೇನ್ ಗುಡಾಲ್ 45 ವರ್ಷಗಳ ಕಾಲ ಚಿಂಪಾಂಜಿಗಳೊಡನೆ ಕಳೆದು ಅವುಗಳ ಬದುಕಿನ ಬಗ್ಗೆ ನಮ್ಮ ಮೂಢನಂಬಿಕೆಗಳನ್ನು ನಿವಾರಿಸಿ ನಮ್ಮ ಅರಿವನ್ನು ಹೆಚ್ಚಿಸಿದಾಕೆ. ಚಿಂಪಾಂಜಿಗಳ ವರ್ತನೆಯು ಮನುಷಯನ ವರ್ತನೆಗಿಂತ ಭಿನ್ನವಾಗಿಲ್ಲ. ಅವು ಮನುಷ್ಯರ ಹಾಗೆ ಪ್ರೀತಿಸಬಲ್ಲವು. ಮನುಷ್ಯರ ಹಾಗೆ ಕುಟಿಲ ತಂತ್ರಗಳನ್ನು ಹೂಡಬಲ್ಲವು. ಮನುಷ್ಯರ ಹಾಗೆ ಯುದ್ಧ ಮಾಡಿ ಕೊಲ್ಲಬಲ್ಲವು ಎನ್ನುವುದನ್ನು ಆಧಾರ ಸಮೇತ ನಿರೂಪಿಸಿದಾಕೆ.
ಜೇನ್ ಪ್ರಾಣಿಗಳ ಹಾಗೂ ಅವುಗಳ ಪರಿಸರವನ್ನು ರಕ್ಷಿಸುವುದರ ಬಗ್ಗೆ ‘ರೂಟ್ಸ್ ಅಂಡ್ ಶೂಟ್ಸ್‘ ಅಭಿಯಾನವನ್ನು ಆರಂಭಿಸಿದರು. ಈಗ ಅದು ಜಗತ್ತಿನ 100 ದೇಶಗಳಲ್ಲಿ 10,000 ಸಂಸ್ಥೆಗಳಿಗೆ ವ್ಯಾಪಿಸಿದೆ. ಕಾಡುಪ್ರಾಣಿಗಳನ್ನು ಕೊಲ್ಲುವುದು, ವೈಜ್ಞಾನಿಕ ಪ್ರಯೋಗಗಳಿಗೆ ಬಳಸುವುದು, ಪ್ರಾಣಿ ಸಂಗ್ರಹಾಲಯದಲ್ಲಿಡುವುದು ಇತ್ಯಾದಿಗಳನ್ನು ವಿರೊಧಿಸುವ ಜೇನ್ ಕಾಲೇಜು ಮೆಟ್ಟಿಲನ್ನು ಹತ್ತಿಲ್ಲ! ಆದರೆ ಜೇನ್ ಅವರಿಗೆ ವಿಶ್ವದಾದ್ಯಂತ ಅಸಂಖ್ಯ ಪ್ರಶಸ್ತಿಗಳು ಹಾಗೂ ಗೌರವ ಡಾಕ್ಟೊರೇಟ್ಗಳು ಸಂದಿವೆ. ಒಬ್ಬ ವ್ಯಕ್ತಿಯ ಏಕಾಗ್ರತೆಯ ಸಾಧನೆಯು ಮನುಕುಲದ ವಿಚಾರವನ್ನೇ ಬದಲಿಸಬಲ್ಲುದು ಎನ್ನುವುದಕ್ಕೆ ಜೇನ್ ಗುಡಾಲ್ ಅವರ ಬದುಕೇ ಸಾಕ್ಷಿ!
|
ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
|
|
| |
|
|
|
|
|
|
|
|
|