uploads/bookpathimages/5326.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
ಹೊನ್ನ ಕಣಜ ಸಂಪುಟ 1 : ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಣ್ಣಕಥೆಗಳ ಸಂಕಲನ
ಲೇಖಕರು: ವಿವಿಧ ಲೇಖಕರು, Various Authors

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 400    
10%
Rs. 360/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪ್ರಜಾವಾಣಿ ಪ್ರಕಾಶನ, Prajavani Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 484
ಪುಸ್ತಕದ ಗಾತ್ರ : 1/8 Demy Size
ಕೋಡ್ : 1124587

ಹೊನ್ನ ಕಣಜ

ಹೊಸಗನ್ನಡ ಸಾಹಿತ್ಯದ ಸಣ್ಣಕಥೆಗಳ ಪರಂಪರೆಗೆ `ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ನೀಡಿರುವ ಕೊಡುಗೆ ಅಸಾಧಾರಣ. ದೀಪಾವಳಿ ವಿಶೇಷಾಂಕಕ್ಕೂ ಕನ್ನಡದ ಸಣ್ಣಕಥೆಗಳಿಗೂ ಕರುಳುಬಳ್ಳಿಯ ಸಂಬಂಧವಿದೆ ಅನ್ನಿಸುವಂತೆ ಪ್ರಮುಖ ಕಥೆಗಾರರ ಅನನ್ಯ ಕಥೆಗಳು ವಿಶೇಷಾಂಕಗಳ ಒಡಲಲ್ಲಿ ಅರಳಿವೆ. ದೀಪಾವಳಿ ಕಥಾಸ್ಪರ್ಧೆಗೆ ಅರವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ, ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಥೆಗಳನ್ನು ಮೂರು ಸಂಪುಟಗಳಲ್ಲಿ ಸಂಕಲನ ಮಾಡಿ ಕನ್ನಡ ಓದುಗರ ಕೈಗಿಡುವುದು ..ಪ್ರಜಾವಾಣಿ ಪ್ರಕಾಶನ.. ದ ಮತ್ತು ಪ್ರಜಾವಾಣಿಯ ಸಂಪಾದಕರಾದ ಕೆ. ಎನ್. ಶಾಂತ ಕುಮಾರ್ ಅವರ ಕನಸಿನ ಯೋಜನೆ. ಸಣ್ಣಕಥೆಗಳ ಈ "ಹೊನ್ನ ಕಣಜ"ದ ಪ್ರಥಮ ಸಂಪುಟ ಪ್ರಕಟವಾಗಿದೆ.

ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಈ ಕಥನ ಕಾಲ, ಕಾಲದ ಕಥನವೂ ಆಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ವಸ್ತು ಮತ್ತು ವಿನ್ಯಾಸದಲ್ಲಿ ಅದು ಕಾಲದ ಜೊತೆ ಹೆಜ್ಜೆ ಹಾಕಿದೆ. ಹೊಸಗನ್ನಡ ಸಾಹಿತ್ಯದ ಎಲ್ಲ ಚಳುವಳಿಗಳ ಆಶಯಗಳು ಇಲ್ಲಿ ಅಭಿವ್ಯಕ್ತಿ ಪಡೆದಿವೆ. ನೂರಾರು ಪ್ರತಿಭಾವಂತರು ಈ ಕಥಾಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಅತ್ಯುತ್ತಮ ಸಾಹಿತಿಗಳು ತೀರ್ಪುಗಾರರಾಗಿ ಪಾಲ್ಗೊಂಡಿದ್ದಾರೆ. ಕನ್ನಡ ನಾಡಿನ ಸಮಸ್ತ ಸೃಜನಶೀಲ ಬರಹಗಾರರನ್ನು ಒಳಗೊಳ್ಳುವ ವಾರ್ಷಿಕ ಸಾಹಿತ್ಯ ಕೈಂಕರ್ಯವಾಗಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ಮುಂದುವರೆಯುತ್ತಿದೆ. ಅದರ ಅದ್ಭುತ ಬಹುಮಾನಿತ ಕಥೆಗಳು ..ಹೊನ್ನ ಕಣಜ.. ಸಂಪುಟಗಳಲ್ಲಿ ಸೇರಲಿವೆ.

..ಪ್ರಜಾವಾಣಿ ಪ್ರಕಾಶನ.. ಇದುವರೆಗೆ ಸ್ಕೂಪ್ (ಕುಲದೀಪ್ ನಯ್ಯರ್), ವಚನ ಸಾಹಿತ್ಯ ಸಂವಾದ, ಜಾತಿ ಸಂವಾದ, ಸಮಾನತೆ ಕನಸನ್ನು ಮತ್ತೆ ಕಾಣುತ್ತ... (ಅತಿಥಿ ಸಂಪಾದಕ: ದೇವನೂರು ಮಹಾದೇವ, ತೃತೀಯ ಮುದ್ರಣ), ನಾರೀಕೇಳಾ (ಎಂ. ಎಸ್. ಆಶಾದೇವಿ) ಮತ್ತು ಅಂಕುರ (ಡಾ. ಎಸ್. ಎಸ್. ವಾಸನ್) ಪುಸ್ತಕಗಳನ್ನು ಪ್ರಕಟಿಸಿದೆ.

ಲೇಖಕರ ಇತರ ಕೃತಿಗಳು
15%
ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾದ ....
ವಿವಿಧ ಲೇಖಕರು, Various Authors
Rs. 1215    Rs. 1033
5%
ರೆವಿನ್ಯೂ : ರೆವಿನ್ಯೂ ....
ವಿವಿಧ ಲೇಖಕರು, Various Authors
Rs. 325    Rs. 309
15%
ನೀತಿ ಮತ್ತು ಮೌಲ್ಯಾಧಾರಿತ ....
ವಿವಿಧ ಲೇಖಕರು, Various Authors
Rs. 540    Rs. 459
10%
ಜನಪ್ರಿಯ ಕನ್ನಡ ಕಾಪಿ ....
ವಿವಿಧ ಲೇಖಕರು, Various Authors
Rs. 45    Rs. 41
Best Sellers
ನೀತಿ ನಡತೆಯ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 45/-   Rs. 50
Manorama Year Book 2017 with CD
Malayala Manorama
Rs. 270/-   Rs. 300
ಶ್ರೀ ಕನಕದಾಸರು
ಬಸವರಾಜ ನಾಯ್ಕರ, Basavaraja Naikara
Rs. 50/-   Rs. 55
ಬಾನು ಬೆಳಗಿತು - ತ್ರಿವೇಣಿ
ತ್ರಿವೇಣಿ , Triveni
Rs. 81/-   Rs. 85

Latest Books
ಸಾಮಾನ್ಯ ಅರ್ಥಶಾಸ್ತ್ರ : ಎರಡು ಸಂಪುಟಗಳು ಸೇರಿ
ಸೋಮಶೇಖರ್ ನೇ ತಿ, Somsekhar Ne Thi
Rs. 1283/-   Rs. 1350
Natural Benefits of Urine Therapy
ಜಗದೀಶ್ ಆರ್ ಭುರಾನಿ, Jagadish R Bhurani
Rs. 180/-   Rs. 200
ಭಾರತದ ಧೀಮಂತ ವಿಜ್ಞಾನಿ ಪ್ರೊ. ಸತ್ಯೇಂದ್ರನಾಥ ಬೋಸ್ ಬದುಕು - ಸಾಧನೆ
ಸಂಪಾದಕರು: ಮಜುಮ್ದಾರ್, ಪಾರ್ಥ ಘೋಷ್,Mujumdar c k, Part
Rs. 108/-   Rs. 120
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.