Items
0
Total
  0.00 
Welcome Guest.

 
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 9
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ಕೋಡ್ : 169566

ಅನಾದಿಕಾಲದಿಂದಲೂ ಭಾರತದ ನಾಗರಿಕತೆಯ ಹಾಗೂ ಸಂಸ್ಕೃತಿಯ ಒಂದು ಉಜ್ವಲ ಪ್ರತೀಕ ಗಂಗಾನದಿ. ಗಂಗೋತ್ರಿ, ಯಮುನೋತ್ರಿ, ಬದರಿ, ಕೇದಾರ, ಇವು ಹಿಮಾಲಯದ ನಾಲ್ಕು ಧಾಮಗಳು. ಗಂಗೋತ್ರಿ ಗಂಗೆಯ ಜನ್ಮಭೂಮಿ; ಕೇದಾರ, ಬದರಿಗಳು ಶಿವನ ಮತ್ತು ವಿಷ್ಣುವಿನ ನೆನಪುಗಳಿಂದಾಗಿ ಗಂಗೆಯೊಂದಿಗೆ ಸಂಬಂಧ ಹೊಂದಿವೆ. ಮಂದಾಕಿನೀ ಅಲಕನಂದಾ ನದಿಗಳು ಕೂಡ ಅಲ್ಲಿಯೇ ಉಗಮಿಸಿ ಗಂಗೆಯನ್ನು ಸೇರುತ್ತವೆ. ಯಮುನೆಯಂತೂ ಗಂಗೆಯನ್ನು ಸೇರುವುದು ಪ್ರಯಾಗದಲ್ಲಿ. ಭಾರತೀಯರ ದೃಷ್ಟಿಯಲ್ಲಿ ಗಂಗೆ ಒಂದು ಪವಿತ್ರ ನದಿಯಾಗಿರುವುದು ಸಹಜವೇ. ‘ಗಂಗೆಯ ಶಿಖರಗಳಲ್ಲಿ’ ಕನ್ನಡದ ಹೆಮ್ಮೆಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಗಂಗೆಗೆ ಸಂಬಂಧಿಸಿದ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿದ ಅನುಭವ ಕಥನ. ಅವರು ನಾನು ಹೊರಟ ದಾರಿಯಲ್ಲಿ ನಾನು ಪಡೆದ ಅನುಭವಗಳನ್ನು, ನನ್ನಲ್ಲಿ ಮೂಡಿದ ಭಾವನೆಗಳನ್ನು ಚಿತ್ರಿಸಿರುವುದಾಗಿ ಹೇಳಿದ್ದಾರೆ, ನಿಜ. ಆದರೆ ಇಲ್ಲಿನ ಪುಟಗಳಲ್ಲಿರುವುದು ಅನಂತ ಮೌನದಲ್ಲಿರುವ ಗಿರಿ ಗಹ್ವರಗಳ ಅಪೂರ್ವ ಸೌಂದರ್ಯ, ನದಿ, ಸರೋವರಗಳ ಮಂಜುಳ ನಿನಾದ, ವಿವಿಧ ಭೂದೃಶ್ಯಗಳ ವರ್ಣವೈಭವ. ಇವೆಲ್ಲವನ್ನೂ ರೂಪಕಗಳ ಮೂಲಕ ಸ್ಫುಟಗೊಳಿಸುವ ಕವಿಸಹಜ ಪ್ರತಿಭೆ. ಹಿಮಾಲಯವನ್ನಾಗಲೀ ಗಂಗೆಯ ಉಗಮ, ಪ್ರವಾಹಗಳನ್ನಾಗಲೀ ಕಣ್ಣಾರೆ ನೋಡದವರಿಗೆ ಈ ಗ್ರಂಥವೊಂದು ಅಕ್ಷಯ ನಿಧಿ.

ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ಹುಟ್ಟಿದ್ದು ೧೯೨೬ರಲ್ಲಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಅಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ. ೧೯೫೩ರಲ್ಲಿ ಮೈಸೂರು ವಿಶ್ವದ್ಯಾನಿಲಯದಿಂದ ಮೂರು ಚಿನ್ನದ ಪದಕಗಳೊಡನೆ ಎಂ.ಎ. ಪದವಿ; ೧೯೬೫ರಲ್ಲಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ `ಸೌಂದರ್ಯ ಸಮೀಕ್ಷೆ` ಪ್ರೌಢಪ್ರಬಂಧಕ್ಕಾಗಿ ಡಾಕ್ಟೊರೇಟ್ ಪದವಿ. ೧೯೪೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಶಿವರುದ್ರಪ್ಪನವರು ೧೯೬೩ರಿಂದ ೧೯೬೬ರ ವರೆಗೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು; ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ನಂತರ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನಿವೃತ್ತರಾದರು. ಶಿವರುದ್ರಪ್ಪನವರು ಕನ್ನಡದ ಅಗ್ರಶ್ರೇಣಿಯ ಕವಿಗಳಲ್ಲಿ ಒಬ್ಬರಾಗಿ ಮನೆಮಾತಾಗಿರುವವರು. ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ಗೋಡೆ, ಕಾರ್ತೀಕ, ಪ್ರೀತಿ ಇಲ್ಲದ ಮೇಲೆ, ಹೀಗೆ ಅವರ ೧೩ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟವಾಗಿವೆ. ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನ, ಮಹಾಕಾವ್ಯ ಸ್ವರೂಪ, ಅನುರಣನ, ಕನ್ನಡ ಕವಿಗಳ ಕಾವ್ಯಕಲ್ಪನೆ, ಅವರ ವಿಮರ್ಶಾ ಕೃತಿಗಳಲ್ಲಿ ಮುಖ್ಯವಾದುವು. ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚಾತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ ಪ್ರವಾಸ ಕಥನಗಳು. ಶಿವರುದ್ರಪ್ಪನವರು ಪಡೆದಿರುವ ಅನೇಕಾನೇಕ ಪ್ರಶಸ್ತಿ, ಪುರಸ್ಕಾರಗಳಲ್ಲಿ ಕರ್ನಾಟಕದ ರಾಷ್ಟ್ರಕವಿ ಗೌರವ (೨೦೦೬), ಸೋವಿಯೆಟ್ ಲ್ಯಾಂಡ್ ನೆಹರೂ ಪ್ರಶಸ್ತಿ (೧೯೭೩), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೪), ಪಂಪ ಪ್ರಶಸ್ತಿ (೧೯೯೮), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೮೨), ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ (೨೦೧೦) ಮುಖ್ಯವಾದುವು. ದಾವಣಗೆರೆಯಲ್ಲಿ ನಡೆದ ೬೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದ ಶಿವರುದ್ರಪ್ಪನವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್ ಪ್ರಶಸ್ತಿಗಳೂ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ `ನಾಡೋಜ` ಪ್ರಶಸ್ತಿಯೂ ಲಭಿಸಿವೆ.

ಲೇಖಕರ ಇತರ ಕೃತಿಗಳು
10%
ಚೆಲುವು ಒಲವು (ಕಾವ್ಯ)
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 45    Rs. 41
10%
ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ....
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 1500    Rs. 1350
Rs. 57    Rs. 51
Rs. 210    Rs. 189
Best Sellers
ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 23/-   Rs. 25
ಅಲ್ಪಾಯುಷಿ ಮಹಾನ್ ಸಾಧಕರು - ಭಾಗ - 2
ಗೀತಾ ಶ್ರೀನಿವಾಸನ್, Geetha Srinivasan
Rs. 77/-   Rs. 85
ಆಹಾ ಎಷ್ಟೊಂದು ಚಟುವಟಿಕೆಗಳು
ಅರವಿಂದ ಗುಪ್ತ, Aravind Gupta
Rs. 135/-   Rs. 150
ಹುಡುಗಾಟ ಉಡುಕಾಟ (ಮಲೆನಾಡಿನ ರೋಚಕ ಕತೆಗಳು ಭಾಗ - ೬)
ಗಿರಿಮನೆ ಶ್ಯಾಮರಾವ್, Girimane Shyamarao
Rs. 135/-   Rs. 150

Latest Books
ಆನೆ ಕಲಿಸಿದ ಪಾಠ ಮತ್ತು ಮೀನುಗಳ ತಾತ್ಸಾರ
ಇನ್ಫಿನಿಟಿ ಪಬ್ಲಿಷಿಂಗ್, ನವಕರ್ನಾಟಕ ಪಬ್ಲಿಕೇಷನ್ಸ್, Infinity And Navakarnataka
Rs. 45/-   Rs. 50
ಶೋಧ : ಕಾದಂಬರಿ
ಯೋಗಪ್ಪನವರ್ ಎಸ್ ಎಫ್, Yogappanavar S F
Rs. 113/-   Rs. 125
ಕೊನೆಯ ಕೊಡುಗೆ
ಜಿಮ್ ಸ್ಟೋವಾಲ್, Gim Stowall
Rs. 86/-   Rs. 95
ಮಾಯಿಯ ಮೂಖಗಳು : ಕತೆಗಳು
ರಾಘವೇಂದ್ರ ಪಾಟೀಲ, Raghavendra Patil
Rs. 117/-   Rs. 130


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.