|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
792 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789384486938 |
ಕೋಡ್ |
: |
194200 |
ಮೋಹನದಾಸ್ ಕರಮ್ಚಂದ್ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಪದಾರ್ಪಣಮಾಡಿದ್ದು 1893ರಲ್ಲಿ. ಅನಂತರ ಅಲ್ಲಿ ಅವರು ಕಳೆದ ಎರಡು ದಶಕಗಳು ಗಾಂಧಿಯವರ ಬದುಕಿನ ಗುರಿಗಮ್ಯತೆಗಳನ್ನು ರೂಪಿಸಿದ ಪರ್ವ ಕಾಲ. 1915ರಲ್ಲಿ ಭಾರತಕ್ಕೆ ಹಿಂದಿರುಗುವುದಕ್ಕೆ ಮೊದಲು ಗಾಂಧಿಯವರ ಆದರ್ಶ, ವಿಚಾರಧಾರೆಗಳೆಲ್ಲ ಮೂಲಭೂತವಾಗಿ ಹರಳುಗಟ್ಟಿದ್ದು ದಕ್ಷಿಣ ಆಫ್ರಿಕಾದಲ್ಲೇ. ಸಾಮ್ರಾಜಶಾಹಿ ಮತ್ತು ಜನಾಂಗೀಯ ಭೇದಭಾವಗಳು ಅವರಿಗೆ ಮನವರಿಕೆಯಾದದ್ದು ಇಲ್ಲೇ. ಬ್ರಿಟಿಷ್ ಸಾಮ್ರಾಜ್ಯವನ್ನು ನಿಕೃಷ್ಟಗೊಳಿಸುವ ಹಾಗೂ ಆಖ್ಯೆರಾಗಿ ಅದನ್ನು ನಿರ್ನಾಮಗೊಳಿಸುವ ಅವರ ತತ್ತ್ವಸಿದ್ಧಾಂತಗಳು. ಕಾರ್ಯತಂತ್ರಗಳು ರೂಪಗೊಂಡು ಈ ಅವಧಿಯಲ್ಲೇ ಎಂದು ಸಂಶೋಧನಾತ್ಮಕವಾಗಿ ಸಾಕ್ಷಾತ್ಕಾರಿಸುವ ರಾಮಚಂದ್ರ ಗುಹ ಅವರು ಈ ಗ್ರಂಥ ನಾಲ್ಕು ಖಂಡಗಳ ಪತ್ರಾಗಾರಗಳಲ್ಲಿನ ಅಮೂಲ್ಯ ಸಾಕ್ಷ್ಯಾಧಾರಗಳಿಂದ ಪುಟಪುಟದಲ್ಲೂ ಓದುಗರ ಆಸಕ್ತಿಯನ್ನು ಕೆರಳಿಸುತ್ತದೆ. ತುಂಬಿತುಳುಕುವ ಸಿರಿಪ್ರದ ವಿವರಗಳಿಂದ ವಿಸ್ಮಯಗೊಳಿಸುತ್ತದೆ.
ಅಮಾನುಷ ಜನಾಂಗೀಯ ಭೇದ ನೀತಿಯ ವಿರುದ್ಧ ಎಲ್ಲ ಜಾತಿಕುಲವರ್ಗಗಳ ಜನರನ್ನು ಸಂಘಟಿಸಿ, ಅಹಿಂಸೆಯ ದೀಕ್ಷೆ ತೊಟ್ಟು, ಮಾನವ ಘನತೆಯನ್ನು ಎತ್ತಿ ಹಿಡಿವ ಗಾಂಧಿ ಮಜಾತ್ಮನಾದ ಪರಿಯನ್ನು ನಿರೂಪಿಸುವ ಈ ರೋಚಕ ಕಥನ ರಾಮಚಂದ್ರ ಗುಹ ಅವರು ಮುಕ್ತಮನದ ಧೀಮಂತ ಸಂಶೋಧನೆಯ ಮತ್ತೋಂದು ಮಹಾತ್ವದ ಕೃತಿ ‘ಗಾಂಧಿ ಮಹಾತ್ಮರಾದುದು - ದಕ್ಷಿಣ ಆಫ್ರಿಕಾ ದಿನಗಳು‘ ಭಾಗ - 1 ಹಾಗೂ ಭಾಗ - 2.
|
| | |
|
|
|
|
|
|
|
|