|
|
|

| Rs. 70 | 10% |
Rs. 63/- | |
 |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವಸಂತ ಪ್ರಕಾಶನ, Vasantha Prakashana |
ಈಗಿನ ಮುದ್ರಣದ ಸಂಖ್ಯೆ |
: |
2 |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
96 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9789383052868 |
ಕೋಡ್ |
: |
189324 |
ಯುರೋಪಿಯನ್ ಸಾಹಿತ್ಯದಲ್ಲಿ ಆಧುನಿಕ ಯುಗವು ಆರಂಭವಾದದ್ದೇ ಫ್ರಾನ್ಜ್ ಕಾಫ್ಕ(1883-1924)ನಿಂದ ಎಂಬ ಅಭಿಪ್ರಾಯವಿದೆ. ಕೇವಲ ನಲವತ್ತು ವರ್ಷ ಕಾಲ ಬದುಕಿದ್ದ ಅವನು ಬರೆದದ್ದು ಮೂರೇ ಕಾದಂಬರಿ (ಅದರಲ್ಲಿ ಒಂದು ಅಪೂರ್ಣ) ಮತ್ತು ಕೆಲವು ಸಣ್ಣಕತೆ. ಆದರೂ ಯೂರೋಪಿನ ಪ್ರಮುಖ ದಾರ್ಶನಿಕ ವಿವೇಚನೆಯ ಹಿನ್ನೆಲೆಯಲ್ಲಿ ಅವು ತಮ್ಮ ಸ್ಥಾನವನ್ನು ಪಡೆದುಕೊಂಡಿವೆ. ಇಂದು ಕಾಫ್ಕನ ಪ್ರಭಾವ ಜಗತ್ತಿನಾದ್ಯಂತ ವಿಸ್ತರಿಸಿದೆ. ಕನ್ನಡದ ನವ್ಯಸಾಹಿತ್ಯದಲ್ಲಿಯೂ ಇದನ್ನು ಗುರುತಿಸಬಹುದು.
ಅವನ ಮೊದಲ ಕಾದಂಬರಿ ‘ದಿ ಟ್ರಯಲ್’, ಅವನ ಅದ್ಭುತ ಸಣ್ಣಕತೆ ‘ಮೆಟಮಾರ್ಫಸಿಸ್’ - ಆಯಾ ಪ್ರಕಾರಗಳಲ್ಲಿ ವಿಶ್ವ ಸಾಹಿತ್ಯದಲ್ಲಿಯೇ ವಿಶಿಷ್ಟ ಸಾಧನೆಗಳೆಂದು ಹೆಸರುಗೊಂಡಿವೆ. ಆಧುನಿಕ ಮನುಷ್ಯನ ತಬ್ಬಲಿತನ ಮತ್ತು ದಿಗ್ಭ್ರಾಂತಿಗಳನ್ನು ಕಾಫ್ಕನಷ್ಟು ನೈಜವಾಗಿ, ಮನೋಜ್ಞವಾಗಿ, ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದವರು ಮತ್ತೊಬ್ಬರಿಲ್ಲ.
ಕಾಫ್ಕನ ಬದುಕು-ಬರಹ-ಪ್ರತಿಭೆಗಳನ್ನು, ವಿಶೇಷವಾಗಿ ‘ದಿ ಟ್ರಯಲ್’ ಹಾಗೂ ‘ಮೆಟಮಾರ್ಫಸಿಸ್’ಗಳನ್ನು ಈ ಕಿರುಹೊತ್ತಿಗೆಯಲ್ಲಿ ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ನಾಲ್ಕು ದಶಕಗಳ ಹಿಂದೆ ಪ್ರಕಟವಾಗಿದ್ದ ಈ ವಿಮರ್ಶಾ ಕೃತಿ ಬಹುಶಃ ಕಾಫ್ಕನನ್ನು ಕುರಿತು ಕನ್ನಡದಲ್ಲಿ ಬಂದಿರಬಹುದಾದ ಮೊದಲ ಕೃತಿಯಾಗಿದೆ.
|
| |
|
|
|
|
|
|
|
|
|