|
|

| Rs. 100 | 10% |
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹೊಸದಾಗಿ ಕನ್ನಡ ಕಲಿಯುವವರಿಗೆ ಆಸಕ್ತಿ - ಉತ್ಸಾಹ ತುಂಬುವ ಈ ಪುಸ್ತಕವು ಅತ್ಯುತ್ತಮ ಕೈಪಿಡಿ ಮಾತ್ರವಲ್ಲ ಸ್ವಯಂಕಲಿಕೆಗೂ ಸಾಧನವಾಗಬಲ್ಲದು. ಕನ್ನಡ ಕಲಿಕೆ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಈ ದಿನಗಳಲ್ಲಿ ಕನ್ನಡವನ್ನು ಕಲಿಯಲು, ಮಾತನಾಡಲು, ಓದಲು ಬೇಕಾಗಿರುವ ಎಲ್ಲ ಸುಲಭ ವಿಧಾನಗಳನ್ನು ಇಲ್ಲಿ ಬಳಸಲಾಗಿದೆ. ಸರಳವಾದ ಪದಗಳು, ಸಚಿತ್ರ ನಿರೂಪಣೆ, ಆತ್ಮೀಯ ಸಂಬಂಧಗಳನ್ನು ಪರಿಚಯಿಸುವ ಪ್ರಶ್ನೋತ್ತರಗಳು, ಬುದ್ಧಿಗೆ ಕಸರತ್ತು ನೀಡುವಂಥ ಪದಗಳ ಆಟ, ಕೌಶಲ್ಯಕ್ಕೆ ಸವಾಲೆಸೆದು ಹೊರಗೆಳೆಯುವ ತಂತ್ರಗಾರಿಕೆ ಎಲ್ಲವೂ ಇಲ್ಲಿ ಒಟ್ಟಾಗಿ, ಕನ್ನಡ ಕಲಿಕೆಯನ್ನು ಸಂತೋಷದಾಯಕವಾಗಿಸಿದೆ. ಈ ಪುಸ್ತಕದ ವೈಶಿಷ್ಟ್ಯವೆಂದರೆ ದಿನಬಳಕೆಯ ವಸ್ತುಗಳನ್ನು ಪದಗಳ ಮೂಲಕ ಪರಿಚಯಿಸಿ ಪದಸಂಪತ್ತನ್ನು ವಿಸ್ತರಿಸಿರುವುದು. ಅತಿ ಶ್ರೀಮಂತಿಕೆಯನ್ನು ಸೂಚಿಸುವ ಪದಗಳನ್ನು ಕೈಬಿಟ್ಟು ಶ್ರಮದ ಜೀವನವನ್ನು ಸಂಕೇತಿಸುವ ಪದಗಳನ್ನು ಆಯ್ಕೆ ಮಾಡಲಾಗಿದೆ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಗ್ರಾಮೀಣ ಪರಿಸರದ ತಿಳುವಳಿಕೆ ಹೆಚ್ಚಿಸುವಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಪ್ರಾಣಿಪಕ್ಷಿಗಳ ಬಗ್ಗೆ ತಿಳುವಳಿಕೆ ಮೂಡಿಸುವ, ಪ್ರಕೃತಿಯನ್ನು ಪ್ರೀತಿಸುವ ಕಡೆಗೆ ಹೆಚ್ಚಿನ ಒಲವು ಇರುವುದನ್ನು ಇಲ್ಲಿನ ವಾಕ್ಯರಚನೆಯಲ್ಲಿ ಗಮನಿಸಬಹುದು. ಪುಸ್ತಕದ ಕೊನೆಯಲ್ಲಿ ಪುಟ್ಟ ಪದ ಸಂಗ್ರಹವಿದ್ದು ಓದುಗರಿಗೆ ಸಹಕಾರಿಯಾಗಿದೆ.
|
| |
|
|
|
|
|
|
|
|