|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಈ ಕಥೆಗಳು ಹೆಚ್ಚು ಆಧುನಿಕವೂ ಸಮಕಾಲೀನವೂ ಆದ ಸಮಸ್ಯೆಗಳನ್ನು ಎದುರಿಸುತ್ತವೆ... ಇಲ್ಲಿನ ಅಷ್ಟೂ ಕಥೆಗಳು ಯಾವುದೋ ಒಂದು ಐಡಿಯಾಲಜಿ ಅಥವಾ ಐಡೆಂಟಿಟಿಗೆ ಮೀಸಲಾಗದೆ, ಹೆಚ್ಚು ಮಾನವಿಯವಾದ ನೆಲೆಗಳನ್ನು ಅನುಸಂಧಾನ ಮಾಡುತ್ತವೆ. ಯಾರೋ ಒಬ್ಬನನ್ನು ಅಥವಾ ಒಂದು ವರ್ಗವನ್ನು ಶತ್ರು ಎಂದು ಗುರುತಿಸದೆ, ಸನ್ನಿವೇಶದ ಸಂಕೀರ್ಣತೆಯನ್ನು ಗ್ರಹಿಸುತ್ತವೆ. ಹಾಗೆಯೇ ಈಚಿನ ದಿನಗಳಲ್ಲಿ ವ್ಯಾಪಕವಾಗಿರುವ, ಆಧುನಿಕತೆಯನ್ನು ನಮ್ಮ ಕಾಲದ ಎಲ್ಲ ದುರಂತಗಳ ಮೂಲವೆಂದು ತಿಳಿಯುವ ಮನೋಧರ್ಮವೂ ಈ ಕಥೆಗಳಲ್ಲಿ ಕಾಣುವುದಿಲ್ಲ. ಅದು ಮೂಡಿಸಿರುವ ಸಮಾನತೆ, ಸಹಿಷ್ಣುತೆ ಮುಂತಾದ ಮೌಲ್ಯಗಳನ್ನು ಸಂಪ್ರದಾಯ ಶರಣತೆಯ ಸಂಗಡ ಹೋಲಿಸುವ ಪ್ರಯತ್ನಗಳೂ ಇಲ್ಲಿನ ಕಥೆಗಳಲ್ಲಿವೆ. ಆದರೂ ಇಲ್ಲಿನ ಎಲ್ಲ ಕಥೆಗಳೂ ವಿಮರ್ಶಕರ ಒರೆಗಲ್ಲುಗಳ ಆಚೆ, ಓದುಗರ ಮನಸ್ಸನ್ನೂ ಆಳವಾಗಿ ಮುಟ್ಟುತ್ತವೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆ ದೃಷ್ಟಿಯಲ್ಲಿ ಅನುವಾದಕರ ಆಯ್ಕೆಯು ಸರಿಯಾಗಿಯೇ ಇದೆ. ಭೌಗೋಳಿಕ ಮತ್ತು ಸಾಂಸ್ಕøತಿಕ ವ್ಯತ್ಯಾಸಗಳ ಪರಿಣಾಮವಾಗಿ ಹೊಸದೊಂದು ಅನುಭವವನ್ನಂತೂ ಕೊಡುತ್ತದೆ. ಕನ್ನಡ ಓದುಗರಿಗೆ ವಿಭಿನ್ನವಾದ ಕಥೆಗಳನ್ನು ಕೊಡುವುದರಲ್ಲಿ ಡಾ. ಸಾದರ ಅವರು ಯಶಸ್ವಿಯಾಗಿದ್ದಾರೆ.
ಡಾ. ಎಚ್. ಎಸ್. ರಾಘವೇಂದ್ರರಾವ್ (ಮುನ್ನುಡಿಯಲ್ಲಿ)
|
ಕವಿ, ಕಥೆಗಾರ, ವಿಮರ್ಶಕ, ಪ್ರಸಾರತಜ್ಞ ಡಾ. ಬಸವರಾಜ ಸಾದರ ರ್ಯಾಂಕ್ ಮತ್ತು ಚಿನ್ನದ ಪದಕಗಳೊಂದಿಗೆ ಎಂ. ಎ. ಹಾಗೂ ಡಿಪ್ಲೊಮಾ-ಇನ್-ಬಸವ ಸ್ಟಡೀಸ್ ಪೂರೈಸಿದ್ದಾರೆ. 31 ವರ್ಷ ಆಕಾಶವಾಣಿಯಲ್ಲಿ ಕೆಲಸ ಮಾಡಿ, ಬೆಂಗಳೂರು ಕೇಂದ್ರದ ನಿರ್ದೇಶಕ ಮತ್ತು ಆಕಾಶವಾಣಿಯ ದಕ್ಷಿಣ ವಲಯದ ಉಸ್ತುವಾರಿ ನಿರ್ದೇಶಕರಾಗಿ 2015ರಲ್ಲಿ ನಿವೃತ್ತರಾಗಿದ್ದಾರೆ.
ತಪ್ದಂಡ, ಸಿಸಿಫಸ್ರ ಸುತ್ತು, ಬುದ್ಧನ ಭಿಕ್ಷಾಪಾತ್ರೆ, ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು, ಅನುಮಿತಿ, ರೂಪಗಳನು ದಾಟಿ, ಹೊಸ ಆಲೋಚನೆ, ತಮಂಧಕ್ಕೆ ಬೆಳಗು, ವರ್ತಮಾನಕ್ಕೂ ವಚನ, ವಚನ ವರ್ಷ-ಮುಂತಾದ 14 ಸ್ವತಂತ್ರ ಹಾಗೂ ಆಕಾಶವಾಣಿ ಪ್ರಸಾರ ಸಾಹಿತ್ಯದ 12 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಡಾ. ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಗೊರೂರು ಪ್ರಶಸ್ತಿ, ಭಾರತಿಸುತ, ಸ. ಸ. ಮಾಳವಾಡ, ಕಾವ್ಯಾನಂದ, ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿ ಮೊದಲಾದವುಗಳಿಂದ ಪುರಸ್ಕೃತ ರಾಗಿರುವ ಅವರು ಬರೆದು, ನಿರ್ಮಿಸಿ, ಪ್ರಸಾರಿಸಿದ ಸಾವಿರಾರು ರೇಡಿಯೋ ಕಾರ್ಯಕ್ರಮಗಳು ರಾಜ್ಯದ ಜನತೆಯ ಮನ ಗೆದ್ದಿವೆ.
|
|
| |
|
|
|
|
|
|
|
|