Items
0
Total
  0.00 
Welcome Guest.

 
Rs. 100
10%
Rs. 90/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 136
ಪುಸ್ತಕದ ಗಾತ್ರ : 1/8 Demy Size
ಕೋಡ್ : 1132647

ಹದಿಮೂರು ಪ್ರಬಂಧಗಳುಳ್ಳ ಈ "ಚೆಲುವಿನ ನಿಲುವು" ಹದಿಮೂರು ಬಗೆಯ
ಚೆಲುವಿನ ಫೈಲುಗಳನ್ನು ಬಿಚ್ಚಿ ತೋರಿಸುತ್ತದೆ. ‘ದೈವ’ ಎಂಬ ವ್ಯಕ್ತಿನಿಷ್ಠ ಪ್ರಬಂಧವೊಂದೇ ಸಾಕು ವಿನಾಯಕ ಪ್ರಬಂಧ ರಚನೆಯ ಪ್ರತಿಭೆ, ಪ್ರಾಮಾಣಿಕತೆ, ಕಲಾತ್ಮಕತೆ, ಸಂವೇದನಶೀಲತೆಯ ಹಂತ ಹರವುಗಳನ್ನು ಅರಿತುಕೊಳ್ಳಲಿಕ್ಕೆ. 1936ರಲ್ಲಿ ಇಂಗ್ಲೆಂಡಿಗೆ ತೆರಳಿದ ವಿನಾಯಕರು ತಮ್ಮ ಮೆಚ್ಚಿನ ಕವಿ ಶೆಲ್ಲಿಯ ಜನ್ಮಸ್ಥಳವಾದ ‘ಫೀಲ್ಡಪ್ಲೇಸ್’ ನಿಂದ ಹಿಡಿಮಣ್ಣು ತರುವೆನೆಂದು ಸಾಂಕೇತಿಕವಾಗಿ ನುಡಿದು, ಆಕ್ಸ್ ಫರ್ಡ್ ಬಿ.ಎ.ಪದವಿಯ ಪ್ರಥಮವರ್ಗದ ಯಶಸ್ಸಿನೊಂದಿಗೆ ಮಾತೃಭೂಮಿಗೆ ಮರಳಿದರು. ಮರಳುವ ಮೊದಲು ಅಲ್ಲಿ ನಡೆದ ದೈವದಾಟವನ್ನು ಈ ಪ್ರಬಂಧದಲ್ಲಿ ವಿಸ್ತರಿಸುತ್ತಾರೆ. ಯಶಃಫಲ ಕೈಗೆ ಎಟುಕುವ ಹೊತ್ತಿಗೆ ಸ್ಕಾಟ್‍ಲಂಡ್ ಪ್ರವಾಸಮಧ್ಯದಲ್ಲಿ ಉಲ್ಬಣಿಸಿದ ಕರುಳುಬೇನೆಯಿಂದಾಗಿ ಅನಾಥರಂತೆ ಆಸ್ಪತ್ರೆಯೊಂದರ ಶಸ್ತ್ರಕ್ರಿಯೆಯ ಶರಶಯ್ಯೆಯ ಮೇಲೆ ಮಲಗುವ ಪ್ರಸಂಗ. ಈ ಪ್ರಸಂಗದ ವರ್ಣನೆಯಲ್ಲಿ ವ್ಯಕ್ತಿಯ ಬದುಕಿನಲ್ಲಿ ದೈವದ ಪಾತ್ರ, ಎಡಿನ್‍ಬರೋ ಆಸ್ಪತ್ರೆಯಲ್ಲಿ ಗುಣಮುಖರಾದ ರೋಗಿಗಳು ತೋರುವ ಮಾನವತಾಭಾವ, ಅಲ್ಲಿಯ ದಾದಿಗಳು ವ್ಯಕ್ತಪಡಿಸುವ ಮಾತೃಭಾವ, ಕೊನೆಗೆ "ವೈವಾ" ಪರೀಕ್ಷೆ ಇಲ್ಲದೆಯೇ ಆಕ್ಸ್ ಫರ್ಡಿನ ಕುಲಪತಿಗಳೂ ಪ್ರಾಧ್ಯಾಪಕರೂ ಗೋಕಾಕರಿಗೆ ಅವರ ಶ್ರೇಷ್ಠತೆಯನ್ನು ಗುರುತಿಸಿ - ಪ್ರಥಮ ದರ್ಜೆಯ ಪದವಿಯನ್ನು ದಯಪಾಲಿಸಿ
ತೋರಿದ ಗುಣಗ್ರಾಹಿತ್ವ - ಈ ಎಲ್ಲ ಅಂಶಗಳನ್ನು ಒಂದೊಂದಾಗಿ ಪ್ರಬಂಧಕಾರರು
ಎತ್ತಿತೋರಿಸುವಾಗ ವಾಚಕನ ಅಭಿಮಾನ ಉಕ್ಕಿಬಂದು ಈ ಕನ್ನಡಪುತ್ರನ ಸಿದ್ಧಿಯನ್ನೂ ಶ್ರದ್ಧೆಯನ್ನೂ ನೆನೆದು ಪುಲಕಿತನಾಗುತ್ತೇನೆ. "ನನ್ನ ಜೀವನದ ಚಮತ್ಕತಿಗಳಲ್ಲಿ ಇದೊಂದು. ನಾವು ನಮ್ಮ ಜೀವನವನ್ನು ಬಾಳಿದರೂ, ದೈವವೇ ಅದರ ನಕ್ಷೆಯ ರೂಪರೇಷೆಗಳನ್ನು ಬರೆಯುತ್ತಿರುವುದೆಂದು ಅನೇಕ ಸಲ ನನಗೆನ್ನಿಸಿದೆ" ಎಂದು ಗೋಕಾಕರು ನುಡಿಯುವಾಗ ಇದೇ ಶ್ರದ್ಧೆ, ಸಂಸ್ಕೃತಿಗಳಲ್ಲಿ ಬೆಳೆದುಬಂದ ನಾವು ಅವರ ಈ ಸಂವೇದನೆಗೆ ಹೌದೆಂದು ಸ್ಪಂದಿಸುತ್ತೇವೆ. "ದೈವ"ದಲ್ಲಿ ವಿನಾಯಕರು ತಮ್ಮ ವ್ಯಕ್ತಿತ್ವದ ಕವಚವನ್ನೇ ತೆರೆದಿಟ್ಟು
ಅಂತರಂಗದ ದರ್ಶನವನ್ನು ಮಾಡಿಸಿದ್ದಾರೆ.

-ಎನ್ಕೆ
(ಮುನ್ನುಡಿಯಿಂದ)
....................................................
ವಿ. ಕೃ. ಗೋಕಾಕ್ ಕನ್ನಡ ಸಾಹಿತ್ಯ ಕಂಡ ಅಪರೂಪದ ಕವಿ, ಚಿಂತಕ, ಶಿಕ್ಷಣ
ತಜ್ಞ, ತತ್ವಶಾಸ್ತ್ರಜ್ಞ. ಅವರ ಕಾವ್ಯದಲ್ಲಿ ಹೇಗೋ ಹಾಗೆಯೇ ಗದ್ಯದಲ್ಲಿಯೂ ಸಹ
ತಾತ್ವಿಕ ವಿಚಾರಗಳನ್ನು ಸ್ಪಷ್ಟವಾಗಿ, ನೇರವಾಗಿ ಮಂಡಿಸುತ್ತಾರೆ. ಹೀಗೊಂದು
ಚಿಂತನಾಕ್ರಮ, ವಿಚಾರಶೀಲತೆ ಇದೆ ಎಂಬುದು ನಮ್ಮ ಮನಸ್ಸಿಗೆ ಬರುತ್ತದೆ.
ತಮ್ಮೆಲ್ಲ ಕೆಲಸಗಳ ಜೊತೆಗೆ ಗೋಕಾಕರು ಬರೆದ ಸಾಹಿತ್ಯ ರಾಶಿ ಕಡಿಮೆಯೇನಲ್ಲ.
ಅವು ಹೊಸ ಜನಾಂಗಕ್ಕೆ ನಿರಂತರವಾಗಿ ಮುಟ್ಟಬೇಕೆಂಬ ಅಭಿಲಾಶೆಯಿಂದ ಅಭಿನವ
ಅವರ ಎಲ್ಲ ಕೃತಿಗಳನ್ನು ಪ್ರಕಟಿಸಲು ಮುಂದಾಗಿದೆ...
1948ರಲ್ಲಿ ಪ್ರಥಮ ಮುದ್ರಣವಾಗಿದ್ದ ಈ ಕೃತಿ ಅಭಿನವದಿಂದ ಮರುಮುದ್ರಣಗೊಂಡಿದೆ...

ವಿನಾಯಕ ಕೃಷ್ಣ ಗೋಕಾಕರು (1909-1992) ವಿ.ಕೃ.ಗೋಕಾಕ್ ಎಂದೇ ಪರಿಚಿತರು. ಇದುವರೆಗೂ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಮೊದಲ ನಾಲ್ಕು ಪ್ರಶಸ್ತಿಗಳು ನವೋದಯ ಪರ್ವ ಕಾಲದ ಮೇರು ಸಾಹಿತಿಗಳಿಗೆ ಸಂದರೆ(ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ) ನಂತರದ ನಾಲ್ಕು ಪ್ರಶಸ್ತಿಗಳು ನವ್ಯೋತ್ತರ ಕಾಲದ, ಆಧುನಿಕ ಸಮಕಾಲೀನ ಕನ್ನಡ ಸಾಹಿತ್ಯದ ಉದ್ದಾಮ ಸಾಹಿತಿಗಳಿಗೆ ದೊರೆತಿವೆ (ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕಂಬಾರ). ವಿ.ಕೃ.ಗೋಕಾಕರು ನವ್ಯೋತ್ತರ ಕನ್ನಡ ಸಾಹಿತ್ಯ ದಿಗಂತದ ಅರುಣೋದಯವೆನ್ನಬಹುದು.

ವಿನಾಯಕ ಕೃಷ್ಣ ಗೋಕಾಕರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಬಿ.ಎ. ಹಾಗೂ ಎಂ.ಎ.ನಲ್ಲಿ ಪ್ರಥಮ ರ‍್ಯಾಂಕ್ ಪಡೆದರು. ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಅಧ್ಯಾಪಕ ಕೆಲಸವನ್ನು ಮಾಡಿ ಅನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ವಿದೇಶದಿಂದ ಹಿಂದಿರುಗಿ ಸಾಂಗಲಿಯ ವೆಲ್ಲಿಂಗ್ಡನ್ ಕಾಲೇಜಿನ ಪ್ರಾಂಶುಪಾಲರಾದರು. ಅನಂತರ ಹೈದರಾಬಾದ್, ಗುಜರಾತ್ ಹಾಗೂ ಕೊಲ್ಹಾಪುರಗಳಲ್ಲಿ ಪ್ರಾಂಶುಪಾಲ ವೃತ್ತಿಯನ್ನು ನಿಭಾಯಿಸಿ ಕೊನೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ಗೋಕಾಕರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು `ಪದ್ಮಶ್ರೀ` ಪ್ರಶಸ್ತಿ ನೀಡಿ ಗೌರವಿಸಿದೆ.

uploads/authorimages/962.jpg
ಲೇಖಕರ ಇತರ ಕೃತಿಗಳು
10%
ಸಮರಸವೇ ಜೀವನ-ಭಾಗ-1 (ಇಜ್ಜೋಡು, ....
ಗೋಕಾಕ ವಿ ಕೃ, Gokak V K
Rs. 380    Rs. 342
10%
ಆಂಗ್ಲ ಸಾಹಿತ್ಯ ನೀಡಿದ ....
ಗೋಕಾಕ ವಿ ಕೃ, Gokak V K
Rs. 35    Rs. 32
10%
ಸಾಹಿತ್ಯ ವಿಮರ್ಶೆಯ ಕೆಲವು ....
ಗೋಕಾಕ ವಿ ಕೃ, Gokak V K
Rs. 305    Rs. 275
10%
ವಿಶ್ವಮಾನವದೃಷ್ಟಿ
ಗೋಕಾಕ ವಿ ಕೃ, Gokak V K
Rs. 110    Rs. 99
Best Sellers
ಅಮೆರಿಕಾದಲ್ಲಿ ಗೊರೂರು
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 225/-   Rs. 250
ಇನ್ನೂ ಒಂದು
ವಿವೇಕ ಶಾನಭಾಗ, Vivek Shanbhag
Rs. 72/-   Rs. 80
ಸ್ಪರ್ಧೆ : ಕಾದಂಬರಿ
ಅನಂತರಾಮು ಕೆ, Anantharamu K
Rs. 270/-   Rs. 300
ವನ್ಯಜೀವಿಗಳ ಜಾಡು ಹಿಡಿದು
ಸಂಜಯ್ ಗುಬ್ಬಿ, Sanjay Gubbi
Rs. 104/-   Rs. 130

Latest Books
ಖಿಲ
ಶಶಿಧರ ವಿಶ್ವಾಮಿತ್ರ, Shashidhara Vishwamitra
Rs. 189/-   Rs. 210
ನಿಮ್ಮದು ಸರಿಯಾದ ನಿರ್ಧಾರವೇ ?
ಚಂದ್ರಶೇಖರ್ ಸಿ ಆರ್, Chandrashekar C R
Rs. 44/-   Rs. 55
ಮನ್ವಂತರ (ಕಾದಂಬರಿ)
ವಸುಮತಿ ಉಡುಪ, Vasumathi Udupa
Rs. 203/-   Rs. 225
ದೇವರೊಡನೆ ಬಾಳಿದವರು : ಭಾಗ 1 (ಶ್ರೀರಾಮಕೃಷ್ಣರ ಸಂನ್ಯಾಸಿ ಶಿಷ್ಯರು)
ಸ್ವಾಮಿ ಚೇತನಾಂದ, Swamy Chetanananda
Rs. 180/-


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.