|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕೃತಿಯು ಹಲವು ಶತಮಾನಗಳಿಂದ ಸಂಯುಕ್ತ ಭಾರತವು ಸಮಗ್ರವಾಗಿ ಗಳಿಸಿರುವ ಹಲವು ವಿಚಾರಗಳ ದೃಶ್ಯಾವಳಿಯಾಗಿದೆ. ರಹಸ್ಯಗಳೆಲ್ಲವೂ ಮೇಲ್ಮೈನಲ್ಲೇ ಇರುವುದಿಲ್ಲ. ಅವುಗಳಿಗಾಗಿ ಆಳಕ್ಕಿಳಿಯಲೇಬೇಕು. ಭಾರತೀಯರ ಭಾರತೀಯತೆಯ ಬಗ್ಗೆ ಮಾತನಾಡುತ್ತಲೇ ದೇಶಪ್ರೇಮದ ನೆಪದಿಂದ ದುರಭಿಮಾನವನ್ನು ಬೆಳೆಸುವ ಚಿತ್ರದ ಒಂದು ಮುಖವನ್ನು ನಿಸ್ಸಂದೇಹವಾಗಿ ಮುಂದುಮಾಡುತ್ತದೆ. ಪ್ರಖ್ಯಾತ ವೈಯಾಕರಣಿಯಾದ ಪಾಣಿನಿಯು ಬ್ರಾಹ್ಮಣನಾಗಿದ್ದರೂ ಸಹ, ಅವನು ಭಾರತದವನಾಗಿರದೆ, ಇರಾನ್ ನಾಗರಿಕನಾದ ಯೂಸುಫಿಯಾ ಪಠಾನನಾಗಿದ್ದ ಎಂಬ ವಿಚಾರವನ್ನು ಅರಗಿಸಿಕೊಳ್ಳುವುದು ಅಂತಹ ದೇಶಪ್ರೇಮಿಗಳಿಗೆ ಕಷ್ಟವಾಗುತ್ತದೆ.
ಸಂಸ್ಕೃತಿಯು ಮಾನವೀಯತೆಯಂತೆ ಅವಿಭಾಜ್ಯವಾಗಿದ್ದು, ಅಂತ್ಯವಿಲ್ಲದೆ ಮಾದರಿಗಳನ್ನು ಪ್ರತಿಬಿಂಬಿಸುತ್ತದೆ. ಅದರಿಂದಾಗಿಯೇ ನಾನು ‘ಸಮಗ್ರ ಇತಿಹಾಸ ಮತ್ತು ಸಮಗ್ರ ಸಂಸ್ಕೃತಿ‘ ಕುರಿತು ಬರೆದಿದ್ದೇನೆ. ವಿಶ್ವ ಸಂಸ್ಕೃತಿಗೆ ಭಾರತದ ಕೊಡುಗೆಯು ಎಷ್ಟು ಹಿರಿದು ಎಂದರೆ, ಆ ವಿಚಾರವನ್ನು ಮತ್ತೆ ಹೇಳುವುದೇ ಅಸಭ್ಯ ಎನಿಸುತ್ತದೆ. ಆದರೆ, ಸಾಮಾನ್ಯವಾಗಿ ಮರೆಯುವ ವಿಚಾರವೆಂದರೆ ಅದು ಸ್ವೀಕರಿಸುತ್ತಾ ಪಡೆದಿದೆ ಮತ್ತು ಅಂತೆಯೇ, ಅದೇ ಪ್ರಮಾಣದಲ್ಲಿ ಇತರ ಯಾವುದೇ ರಾಷ್ಟ್ರಗಳಿಗಿಂತ ಹೆಚ್ಚಿಗೆ ಪಡೆದಿದೆ. ಏಕೆಂದರೆ ನೀಡುವವರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಅದು ಗಳಿಸಿದ ಲಾಭವನ್ನು ಕಟ್ಟಿಕೊಂಡಿರುವ ವಿಧಾನವೇ ಅದರ ಹಿರಿಯ ವಿಜಯಗಳ ಬಗ್ಗೆ ತಿಳಿಸುತ್ತದೆ.
|
| | |
|
|
|
|
|
|
|
|