|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ರೂಪುಗೊಂಡ ರಾಷ್ಟ್ರೀಯ ಗುರಿಗಳ ಬೆಳವಣಿಗೆಯ ಒಂದು ಹಂತದ ಕ್ರಿಯಾಶೀಲ ಸ್ವರೂಪ ಭಗತ್ಸಿಂಗ್. ಸ್ವಾತಂತ್ರ್ಯವೊಂದನ್ನೇ ಗುರಿಯಾಗಿಟ್ಟುಕೊಂಡು ಅದರ ಗಳಿಕೆಗೆ ಯಾವುದೇ ವಿಧಾನವನ್ನಾದರೂ ಬಳಸಬಹುದೆನ್ನುವವರ ಮತ್ತು ವೈಜ್ಞಾನಿಕ ಸಮಾಜವಾದವೇ ರಾಷ್ಟ್ರದ ಎಲ್ಲ ಸಮಸ್ಯೆಗಳಿಗೂ ಪರಿಹಾರವಾದ್ದರಿಂದ ಅದರ ಸ್ಥಾಪನೆಯೇ ನಮ್ಮ ಹೆಗ್ಗುರಿಯಾಗಬೇಕೆನ್ನುವವರ ನಡುವಿನ ಕಂದರಕ್ಕೆ ಸೇತುವೆಯಾದ ಭಗತ್ಸಿಂಗ್. ರಾಜಕೀಯ ಸ್ವಾತಂತ್ರ್ಯದ ಆಧಾರದ ಮೇಲೆ ಮಾತ್ರ ರಾಷ್ಟ್ರೀಯ ವಿಕಾಸ ಸಾಧ್ಯವೆಂಬ ದೃಷ್ಟಿಯಿಂದ ಹೋರಾಡಿದ ಚಿಂತಕ ಅವನು. ಕಾಲ್ಪನಿಕ ಅಹಿಂಸೆಯ ಶಕಕ್ಕೆ ಇತಿಶ್ರೀ ಹಾಡಿದವರ ಪ್ರತೀಕವಾದ ಭಗತ್ ಜನತೆ ಒಟ್ಟಾಗಿ ಮಾತ್ರ ಸ್ವಾತಂತ್ರ್ಯ ಗಳಿಸಬಲ್ಲುದೆಂದು ನಂಬಿದವನು. ಸ್ವಾತಂತ್ರ್ಯಕ್ಕಾಗಿ ಜೀವ ಮುಡಿಪಾಗಿಟ್ಟವನು. ಆದರೆ, ಅದಷ್ಟೇ ಆಂತಿಮ ಗುರಿಯೆಂದು ಭಾವಿಸಿದವನು. ಒಣಮರಗಳನ್ನು ಕಡಿಯುತ್ತಲೇ ಹೊಸ ಬೀಜಗಳ ಬಿತ್ತನೆಯ ಬಗ್ಗೆ ಆಲೋಚಿಸಿದವನು. ಉಗ್ರ ದೇಶಪ್ರೇಮಿ. ಎಂದರೆ, ಯಾವುದೋ ಭ್ರಾಮಕ ಭವ್ಯ ಸಾಮ್ರಾಜ್ಯದ ಪ್ರೇಮಿಯಲ್ಲ. ದೇಶವೆಂಬ ಮಾನವ ಸಮುದಾಯದ ಪ್ರೇಮಿ. ನಾವು ದಾರಿ ತಪ್ಪಿದರೂ ದಿಕ್ಕುತಪ್ಪದಂತೆ ತಡೆಯಬಲ್ಲ ಧ್ರುವತಾರೆ ಭಗತ್ ಸಿಂಗ್. ಅವನ ಹೋರಾಟದ ಪರಂಪರೆಯ ಹಕ್ಕು ಪಡೆದ ಕ್ರಾಂತಿಕಾರಿ ಜನತೆಯ ದೃಷ್ಟಿಯಿಂದ ಅವನ ವ್ಯಕ್ತಿತ್ವ ಹಾಗೂ ಜೀವನದ ಕ್ರಿಯಾಸರಣಿಯ ನಿರೂಪಣೆ ಇಲ್ಲಿದೆ. ಲೇಖಕ ಡಾ|| ಜಿ. ಆರ್. ನಮ್ಮ ಪರಿಸರದ ವೈಚಾರಿಕ ಚಿಂತನೆಯ ಬೆಳವಣಿಗೆಗೆ ಈಗಾಗಲೇ ನೀಡಿರುವ ಕಾಣಿಕೆಗೆ ಈ ಕೃತಿಯ ಮೂಲಕ ಹೃದಯ ತುಂಬಿದ್ದಾರೆ.
|
| |
|
|
|
|
|
|
|
|
|