|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹೈಸ್ಕೂಲು ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಕಲಿಸುವ ಅಧ್ಯಾಪಕರಿಗೂ ಉಪಯೋಗವಾಗುವಂತೆ ವಿಜ್ಞಾನದ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಇದು ರಚಿಸಲ್ಪಟ್ಟಿದೆ. ಇಂದಿನ ಪೀರಿಯಡ್ ಸಂಸ್ಕೃತಿಯಲ್ಲಿ ಮಕ್ಕಳು ಶಾಲಾ ಪಠ್ಯಗಳನ್ನು ಆತುರಾತುರವಾಗಿ ಕಲಿಯಬೆಕಾದ ಸಂದರ್ಭವಿದ್ದು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿನ ವೇಳೆಯಲ್ಲಿ ತಮ್ಮ ಪಾಠಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ನೀಡುವ ಇಂಥ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭಿಸಿದಲ್ಲಿ ಅವರು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಲ್ಲರು. ಸರಳ ಭಾಷೆ, ಶೈಲಿ, ವಿವರಣೆಗಳಲ್ಲದೆ ಚಿತ್ರಗಳ ಮೂಲಕ ವಿಷಯಗಳನ್ನು ನಿರೂಪಿಸಿದ್ದು ಮಕ್ಕಳಿಗೆ ಉಪಯುಕ್ತ ಕೈಪಿಡಿಗಳಂತೆ ಸಹಾಯಕವಾಗುತ್ತವೆ. ಇನ್ನೂ ಉತ್ತಮ ಫಲಿತಾಂಶವಿರಲೆಂಬ ಉದ್ದೇಶದಿಂದ ಆಯಾ ವಿಷಯತಜ್ಞ ಅಧ್ಯಾಪಕರು, ಪ್ರಾಧ್ಯಾಪಕರೇ ಈ ಪುಸ್ತಕಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಸುಮಾರು ಮೂವತ್ತರಷ್ಟು ಕೃತಿಗಳಿಗಿರುವ “ವಿಜ್ಞಾನ ಸರಳ ಪರಿಚಯ” ಮಾಲೆಯಲ್ಲಿನ ಒಂದು ಪುಸ್ತಕವೇ ಇದು - ಬೆಳಕು.
|
| |
|
|
|
|
|
|
|
|
|