|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬೆಂಗಳೂರು ಪರಂಪರೆ- ಇತಿಹಾಸ ಸಂಶೋಧನೆಯ ಹೊಸ ನೋಟಗಳು ಕೃತಿಯು ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರದ ಚರಿತ್ರೆ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಕುರಿತು ನಡೆಸಿರುವ ಅಧ್ಯಯನಗಳನ್ನು ಒಳಗೊಂಡಿದೆ. ಇಲ್ಲಿನ ಇಪ್ಪತ್ತೇಳು ಲೇಖನಗಳು ಬೆಂಗಳೂರು ಮತ್ತು ಅದರ ಭಾಗವಾಗಿರುವ ಹಲವು ಐತಿಹಾಸಿಕ ಹಾಗೂ ಸಾಂಸ್ಕøತಿಕ ತಾಣಗಳ ಕಥನಗಳನ್ನು ನಿರೂಪಿಸುತ್ತವೆ. ಪ್ರಾಗೈತಿಹಾಸಿಕ ಕಾಲದಿಂದ ಆರಂಭವಾಗುವ ಕೃತಿಯು 20ನೆಯ ಶತಮಾನದವರೆಗಿನ ವಿವಿಧ ನೆಲೆಗಳನ್ನು ಹಲವು ಆಯಾಮಗಳಲ್ಲಿ ಅನಾವರಣಗೊಳಿಸುತ್ತದೆ. ಮುಖ್ಯವಾಗಿ ಬೆಂಗಳೂರಿನ ಸಾಂಸ್ಕøತಿಕ ಪಲ್ಲಟಗಳಿಗೆ ಕಾರಣವಾದ ಯುದ್ಧಗಳು, ಸಾಂಸ್ಕøತಿಕ ವೈಭವವನ್ನು ಸಾರುವ ಕೋಟೆ, ಅರಮನೆ, ದೇವಾಲಯಗಳು ಮತ್ತು ಕರಗ, ದಸರಾದಂತಹ ಉತ್ಸವಗಳು ಹಾಗೂ ವಿದೇಶಿಗರು ಕಂಡ ಬೆಂಗಳೂರು. ಹೀಗೆ ಹಲವು ಆಯಾಮಗಳ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಬರಹಗಳ ನಡುನಡುವೆ ಬಳಸಿರುವ 120ಕ್ಕೂ ಅಧಿಕ ಛಾಯಾಚಿತ್ರಗಳು ಮತ್ತು ನಕ್ಷೆಗಳು ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಒಟ್ಟಾರೆ, ಕಲಾವಂತಿಕೆ ಮತ್ತು ನಿರೂಪಣೆಯ ದೃಷ್ಟಿಯಿಂದ ಕೃತಿಯು ಒಂದು ಕಲಾಕೃತಿಯಂತೆ ಓದುಗರಿಗೆ ಆನಂದ ಹಾಗೂ ಅರಿವನ್ನೂ ಹಂಚಬಲ್ಲದು.
|
ಎಸ್. ಕೆ. ಅರುಣಿ (ಜ. 1966) ಅವರು ಯಾದಗಿರ ಜಿಲ್ಲೆಯ ಶಹಾಪುರದವರು. ಕೇಂದ್ರ ಸರ್ಕಾರದ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು (ಐ.ಸಿ.ಹೆಚ್.ಆರ್)ನಲ್ಲಿ ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಬೆಂಗಳೂರಿನ ದಕ್ಷಿಣ ಪ್ರ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿ ಕಾರ್ಯ ನಿರ್ವಸುತ್ತಿದ್ದಾರೆ. ಇವರ ಸಂಶೋಧನೆಗಳು ಕರ್ನಾಟಕದ ಇತಿಹಾಸ, ಪುರಾತತ್ವ ಮತ್ತು ಕಲೆಗಳಿಗೆ ಸಂಬಂಧಿಸಿವೆ. ದಖ್ಖನಿ ಚಿತ್ರಕಲೆ (2001), ಯಲಹಂಕ ನಾಡಪ್ರಭುಗಳ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ (2007), Surapura Samsthana – Historical and Archaeological Study of a Poligar state in South India (2004) ಇವರ ಸಂಶೋಧನೆಯ ಪ್ರಮುಖ ಕೃತಿಗಳಾಗಿವೆ. ಹಾಗೂ Gems of Scholarships- Archaeology & Antiquities: Selected Articles from the QJMS 1909-2009 (2009); ಕರ್ನಾಟಕದಲ್ಲಿ ಪುರಾತತ್ವ ಅಧ್ಯಯನಗಳು (2010) ಹಾಗೂ ನಮ್ಮ ಬೆಂಗಳೂರು (2012) ಇವರ ಸಂಪಾದಿತ ಕೃತಿಗಳಾಗಿವೆ. ಅಲ್ಲದೆ, ದಿ ಹಿಂದೂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಇವರ ಅಂಕಣ ಬರಹಗಳು ಪ್ರಕಟವಾಗಿವೆ.
|
|
| |
|
|
|
|
|
|
|
|
|