Items
0
Total
  0.00 
Welcome Guest.

 
Rs. 125    
10%
Rs. 113/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಪ್ನ ಬುಕ್ ಹೌಸ್, Sapna Book House
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2016
ರಕ್ಷಾ ಪುಟ : ಸಾದಾ
ಪುಟಗಳು : 125
ಪುಸ್ತಕದ ಗಾತ್ರ : 1/8 Crown Size
ISBN : 9789385868771
ಕೋಡ್ : 196312

ಲಿಂಗಪ್ಪ, ಬಸವರಾಜು ಅವರು ಕನ್ನಡ ವಿದ್ವಾಂಸರಲ್ಲಿ ಮೊದಲ ಸಾಲಿಗೆ ಸೇರಿದವರು.ಅವರು ವಿಶೇಷ ಪರಿಣತಿ ಪಡೆದಿರುವ ಕ್ಷೇತ್ರಗಳಲ್ಲಿ ಗ್ರಂಥಸಂಪಾದನೆ, ಛಂದಸ್ಸು, ಸಾಹಿತ್ಯಕ ಸಂಶೋಧನೆ ಮತ್ತು ಅನುವಾದಗಳು ಮುಖ್ಯವಾದವು. ಆಧುನಿಕ ಕವಿತೆಗಳ ರಚನೆಯಲ್ಲಿಯೂ ಆಸಕ್ತಿ ತೋರಿಸಿರುವ ಬಸವರಾಜು ಅವರು ಮೂರು ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಬಸವರಾಜು ಅವರು ಕೋಲಾರ ಜಿಲ್ಲೆಯ, ಇಡಗೂರು ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದರು. ಇಡಗೂರು, ಸಿದ್ದಗಂಗೆ ಮತ್ತು ಬೆಂಗಳೂರುಗಳಲ್ಲಿ ಮೊದಲ ಹಂತಗಳ ಶಿಕ್ಷಣವನ್ನು ಪಡೆದ ನಂತರ ಅವರು ವಿಶೇಷ ವ್ಯಾಸಂಗಕ್ಕಾಗಿ ಮೈಸೂರಿಗೆ ತೆರಳಿದರು. ಅಲ್ಲಿ ಬಿ.ಎ.(ಆನರ್ಸ್) (1946) ಮತ್ತು ಎಂ.ಎ. (1951) ಪದವಿಗಳನ್ನು ಕನ್ನಡ ವಿಷಯದಲ್ಲಿ ಪಡೆದುಕೊಂಡರು. ಅವರ ‘ಶಿವದಾಸ ಗೀತಾಂಜಲಿ’ ಎಂಬ ಪುಸ್ತಕಕ್ಕೆ ಮೈಸೂರು ವಿಶ್ವವಿದ್ಯಾಲಯವು ಡಿ.ಲಿಟ್. ಪದವಿಯನ್ನು ನೀಡಿತು. ಸ್ವಲ್ಪ ಕಾಲ, ದಾವಣಗೆರೆ ಮತ್ತು ಮೈಸೂರಿನ ಯುವರಾಜ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನಂತರ, ಬಸವರಾಜು ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯನ್ನು ಸೇರಿದರು.(1967) 1979 ರಲ್ಲಿ ಅವರು ಸೇವೆಯಿಂದ ನಿವೃತ್ತರಾದರು.

ಈ ವಿದ್ವಾಂಸರು, ಗ್ರಂಥಸಂಪಾದನೆಯ ಕ್ಷೇತ್ರದಲ್ಲಿ, ಅನೇಕ ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ; ವಿಶಿಷ್ಟವಾದ ದೃಷ್ಟಿಕೋನಗಳನ್ನು ಅಳವಡಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಅಭಿಜಾತ ಕೃತಿಗಳು ಮತ್ತು ಜ್ಞಾನದ ಆಕರಗಳನ್ನು, ಪಂಡಿತರೇನೂ ಅಲ್ಲದ ಜನಸಾಮಾನ್ಯರ ಅಳವಿಗೆ ನಿಲುಕುವಂತೆ ನೀಡಬೇಕೆನ್ನುವುದೇ ಅವರ ಗುರಿ. ಆದ್ದರಿಂದಲೇ ಅವರು ಅನೇಕ ಮಹಾಕಾವ್ಯಗಳ ಸರಳವಾದ ಗದ್ಯರೂಪಗಳನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಪ್ರಾಚೀನ ಕಾವ್ಯಗಳಲ್ಲಿ ಬರುವ ಪದ್ಯಗಳನ್ನು, ಬಿಡಿ ಪದಗಳಾಗಿ ಒಡೆದು, ಗದ್ಯಸಮೀಪವಾದ ವಾಕ್ಯರಚನೆಯಲ್ಲಿ ಮರುಜೋಡಣೆ ಮಾಡುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಅಗತ್ಯವಿರುವ ಕಡೆಗೆ ಸೂಕ್ತವಾದ ಲೇಖನಚಿಹ್ನೆಗಳನ್ನು ಕೊಟ್ಟಿದ್ದಾರೆ. ಈ ರೀತಿಯ ಪ್ರಯೋಗಗಳಲ್ಲಿ ತೊಡಗಿಕೊಳ್ಳುವುದಕ್ಕಿಂತ ಮುಂಚಿತವಾಗಿಯೂ ಅವರು ಪರಿಶ್ರಮ ವಹಿಸಿ ಗ್ರಂಥಸಂಪಾದನೆ ಮಾಡಿದ್ದರು. ಓಲೆಗರಿಗಳು ಮತ್ತು ಕಾಗದದ ಹಸ್ತಪ್ರತಿಗಳ ನೆರವಿನಿಂದ ಮೂಲಪಠ್ಯವನ್ನು ಗುರುತಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಬಸವರಾಜು ಅವರು ಸಂಪಾದನೆ ಮಾಡಹೊರಡುವ ಕೃತಿಗಳ ಆಯ್ಕೆಯಲ್ಲಿ ಜಾತ್ಯತೀತವಾದ ಧೋರಣೆಯನ್ನು ಹೊಂದಿದ್ದಾರೆ. ‘ಆದಿಪುರಾಣ’ದಂತಹ ಜೈನ ಕೃತಿ, ‘ಬುದ್ಧಚರಿತ’ದಂತಹ ಬೌದ್ಧಕೃತಿ, ‘ತೊರವೆಯ ರಾಮಾಯಣ’, ‘ಶಬ್ದಮಣಿದರ್ಪಣ’ ಯಾವುದೂ ಅವರ ಅನಾದರಕ್ಕೆ ಗುರಿಯಾಗಿಲ್ಲ. ತಮ್ಮ ಅನಿಸಿಕೆಗಳನ್ನು ಸ್ಪಷ್ಟವಾಗಿ ಮಂಡಿಸಲು ಅವರು ಯಾವಾಗಲೂ ಹಿಂಜರಿದಿಲ್ಲ. ಬಸವರಾಜು ಅವರು ಸಂಪಾದಿಸಿರುವ ಗ್ರಂಥಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.

‘ಬಸವೇಶ್ವರರ ವಚನಗಳು’, 1952
‘ಅಲ್ಲಮನ ವಚನಚಂದ್ರಿಕೆ’, 1960
‘ಶಿವದಾಸ ಗೀತಾಂಜಲಿ’, 1963
‘ಬಸವ ವಚನಾಮೃತ’, 1964, 1970, 1989
‘ಅಕ್ಕನ ವಚನಗಳು’, 1966
‘ಅಲ್ಲಮನ ವಚನಗಳು’, 1969
‘ಬಸವಣ್ಣನವರ ವಚನಗಳು’, 1996
‘ಬಸವಣ್ಣನವರ ಷಟ್ಸ್ಥಳದ ವಚನಗಳು’, 1990
‘ದೇವರ ದಾಸಿಮಯ್ಯನ ವಚನಗಳು’,
‘ಸರ್ವಜ್ಞನ ವಚನಗಳು’, (ಪರಮಾರ್ಥ), 1972
‘ಬೆಡಗಿನ ವಚನಗಳು’, 1998
‘ಶಿವಗಣಪ್ರಸಾದಿ ಮಹದೇವಯ್ಯನ ಪ್ರಭುದೇವರ ಶೂನ್ಯಸಂಪಾದನೆ’, 1969
‘ಕಲ್ಯಾಣದ ಮಾಯಿದೇವನ ಶಿವಾನುಭವ ಸೂತ್ರ’, 1998
‘ಪಂಪನ ಆದಿಪುರಾಣ’, 1976
‘ಪಂಪನ ಸರಳ ಪಂಪಭಾರತ’, 1999
‘ಪಂಪನ ಸಮಸ್ತ ಭಾರತ ಕಥಾಮೃತ’
‘ಪಂಪನ ಸರಳ ಆದಿಪುರಾಣ’
‘ಪಂಪನ ಆದಿಪುರಾಣ ಕಥಾಮೃತ’
‘ರನ್ನನ ಸರಳ ಗದಾಯುದ್ಧ’
‘ಚಿಕ್ಕದೇವರಾಯ ಸಪ್ತಪದಿ’, ತಿರುಮಲಾರ್ಯ, 1971
‘ತೊರವೆ ರಾಮಾಯಣ ಸಂಗ್ರಹ’, 1951
‘ಸರಳ ಸಿದ್ದರಾಮಚರಿತೆ’, ರಾಘವಾಂಕ, 2000
‘ರಾಘವಾಂಕನ ಸರಳ ಹರಿಶ್ಚಂದ್ರ ಕಾವ್ಯ’, 2001
‘ಕೇಶಿರಾಜನ ಶಬ್ದಮಣಿದರ್ಪಣ’, 1986
ಕನ್ನಡ ಛಂದಸ್ಸಂಪುಟ, 1974

(ಇದು, ಛಂದಸ್ಸಿಗೆ ಸಂಬಂಧಿಸಿದ ನಾಲ್ಕು ಪ್ರಾಚೀನ ಕನ್ನಡ ಕೃತಿಗಳನ್ನು ಒಂದು ಕಡೆ ತಂದಿರುವ ಮಹತ್ವದ ಕೆಲಸ. ನಾಗವರ್ಮನ ಛಂದೋಂಬುಧಿ, ಈಶ್ವರಕವಿಯ ಕವಿಜಿಹ್ವಾಬಂಧನ, ಗುಣಚಂದ್ರನ ಛಂದಸ್ಸಾರ ಮತ್ತು ವೀರಭದ್ರನ ನಂದಿ ಛಂದೋರ್ಣವಗಳೇ ಆ ಕೃತಿಗಳು.)

ಬಸವರಾಜು ಅವರು ಕೆಲವು ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿವರಗಳು ಈ ರೀತಿ ಇವೆ:

‘ಬುದ್ಧಚರಿತ’, ಅಶ್ವಘೋಷ, 2000
‘ಸೌಂದರನಂದ’, ಅಶ್ವಘೋಷ, 2000
ಭಾಸನ ಭಾರತ ರೂಪಕ, 1958
ನಾಟಕಾಮೃತ ಬಿಂದುಗಳು, 1958
ರಾಮಾಯಣ ನಾಟಕ ತ್ರಿವೇಣಿ, 1958, (ಪ್ರತಿಮಾ ನಾಟಕವೂ ಸೇರಿದಂತೆ ಭಾಸನ ಮೂರು ನಾಟಕಗಳ ಅನುವಾದ.)
ನಿಜಗುಣ ಶಿವಯೋಗಿಯ ತತ್ವದರ್ಶನ, 1991, (ನಿಜಗುಣ ಶಿವಯೋಗಿಯು ರಚಿಸಿರುವ ಆರು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಗಳ ಗದ್ಯಾನುವಾದ.)

ಎಪ್ಪತ್ತೈದರ ಮಾಗಿದ ವಯಸ್ಸಿನಲ್ಲಿ ಕವಿತೆಗಳನ್ನು ರಚಿಸತೊಡಗಿದ ಬಸವರಾಜು ಅವರು, ಇದುವರೆಗೆ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವು ಠಾಣಾಂತರ,(1994) ಜಾಲಾರಿ(1995) ಮತ್ತು ಚಾಯಿಬಾಬಾ.(2005)

ಎಲ್. ಬಸವರಾಜು ಅವರು ಸರ್ಕಾರದಿಂದ ಮತ್ತು ಸಾರ್ವಜನಿಕರಿಂದ ಅನೇಕ ಪ್ರಶಸ್ತಿಗಳು ಮತ್ತು ಸನ್ಮಾನಗಳನ್ನು ಪಡೆದಿದ್ದಾರೆ. ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಪಂಪ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಬಸವ ಪುರಸ್ಕಾರ’, ‘ನಾಡೋಜ ಪ್ರಶಸ್ತಿ’, (ಕನ್ನಡ ವಿಶ್ವವಿದ್ಯಾಲಯ) ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಸಮ್ಮಾನ್ ಹಾಗೂ ಭಾಷಾಂತರ ಬಹುಮಾನಗಳು ಅವುಗಳಲ್ಲಿ ಕೆಲವು. ಅವರು 2009 ರಲ್ಲಿ ಚಿತ್ರದುರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹೀಗೆ, ಬಸವರಾಜು ಅವರು ಸಾಮಾನ್ಯವಾಗಿ ನಿರ್ಲಕ್ಷಿತವಾಗಿರುವ ಕ್ಷೇತ್ರಗಳಲ್ಲಿ ಅಪರೂಪದ ಹಾಗೂ ಜನಪರವಾದ ಕೆಲಸ ಮಾಡಿದ್ದಾರೆ.

ಲೇಖಕರ ಇತರ ಕೃತಿಗಳು
10%
ಸರ್ವಜ್ಞನ ವಚನಗಳು (ಸಪ್ನ)
ಬಸವರಾಜು ಎಲ್ , Basavaraju L
Rs. 150    Rs. 135
10%
ಪಂಪನ ಸಮಸ್ತ ಭಾರತ ....
ಬಸವರಾಜು ಎಲ್ , Basavaraju L
Rs. 295    Rs. 266
10%
ಪ್ರಭುದೇವರ ಶೂನ್ಯಸಂಪಾದನೆ
ಬಸವರಾಜು ಎಲ್ , Basavaraju L
Rs. 380    Rs. 342
10%
ರನ್ನನ ಸರಳ ಗದಾಯುದ್ಧ ....
ಬಸವರಾಜು ಎಲ್ , Basavaraju L
Rs. 230    Rs. 207
Best Sellers
ನೀನಿಲ್ಲದೇ ನನಗೇನಿದೆ..! : ಸುಂದರ ದಾಂಪತ್ಯಕ್ಕೊಂದು ಸರಳ ಮಾರ್ಗದರ್ಶಿ
ವಿರೂಪಾಕ್ಷ ದೇವರಮನೆ, Virupaksha Devaramane
Rs. 135/-   Rs. 150
ಕಾನೂರು ಹೆಗ್ಗಡಿತಿ
ಕುವೆಂಪು, Kuvempu
Rs. 361/-   Rs. 380
ಟೆಲಿವಿಷನ್ ವರದಿಗಾರಿಕೆ
ನಾಗೇಂದ್ರ ಡಾ, Nagendra Dr
Rs. 126/-   Rs. 140
ಪ್ರಬಂಧ ಕುಂಚ - Essay Writing
ಕೌಸಲ್ಯ ಬಾಯಿ, Kousalya Bayi
Rs. 36/-   Rs. 40

Latest Books
ಸೊಪ್ಪೇ ಸಂಪತ್ತು
ಚಂದ್ರಿಕಾ ಪಿ, Chandrika P
Rs. 45/-   Rs. 50
ಇದು ವಿದಾಯವಲ್ಲ : ಹಿಂದಿಯ ಪ್ರಸಿದ್ಧ ಸಾಮಾಜಿಕ ಕಾದಂಬರಿ
ಡಾ. ಧರ್ಮೇಂದ್ರ ಗುಪ್ತ, Dr. Dharmendar Gupta
Rs. 144/-   Rs. 160
ಸುಳ್ಳಿಗೆ ತಕ್ಕ ಶಾಸ್ತಿ ಮತ್ತು ಜಾಣ ಮೊಲ
ಇನ್ಫಿನಿಟಿ ಪಬ್ಲಿಷಿಂಗ್, ನವಕರ್ನಾಟಕ ಪಬ್ಲಿಕೇಷನ್ಸ್, Infinity And Navakarnataka
Rs. 45/-   Rs. 50
ಸೌಖ್ಯ ಸಂಜೀವಿನಿ
ಹೆಗ್ಡೆ ಬಿ ಎಂ, Hegde B M
Rs. 95/-   Rs. 100


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.