Items
0
Total
  0.00 
Welcome Guest.

 
Rs. 114    
10%
Rs. 103/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 12
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 130
ಪುಸ್ತಕದ ಗಾತ್ರ : 1/8 Demy Size
ಕೋಡ್ : 169710

ಅಲೆಮಾರಿಯ ಅಂಡಮಾನ್ : ಕನ್ನಡ ಸಾಹಿತ್ಯದಲ್ಲಿ ಈವರೆಗೂ ಬಂದಿಲ್ಲದ ಹೊಸರೀತಿಯ ಅಸಾಧಾರಣ ಪ್ರವಾಸ ಕಥನ. ಕಾಲ ಮತ್ತು ದೇಶಗಳಲ್ಲಿ, ಅಥವಾ ಚರಿತ್ರೆ ಮತ್ತು ವರ್ತಮಾನಗಳಲ್ಲಿ ಒಮ್ಮೆಲೇ ಚಲಿಸುವ ಬರಹಗಾರರ ಪ್ರಜ್ಞೆ ಅನುಭವಗಳ ಅನೇಕ ಆಯಾಮಗಳನ್ನು ಸಂಕೀರ್ಣವಾಗಿ ಒಟ್ಟೊಟ್ಟಿಗೇ ಸೃಷ್ಟಿಸಿರುವುದನ್ನು ಈ ಕೃತಿಯಲ್ಲಿ ಎಲ್ಲೆಂದರಲ್ಲಿ ಕಾಣಬಹುದು. ಈ ಪ್ರಯತ್ನದಲ್ಲಿ ಲೇಖಕರು ಹೊಚ್ಚ ಹೊಸ ಕಥನ ತಂತ್ರವನ್ನೇ ಕನ್ನಡ ಸಾಹಿತ್ಯದಲ್ಲಿ ರೂಪಿಸಿದ್ದಾರೆ. ಪ್ರವಾಸ ಸಾಹಿತ್ಯದ ಏಕಮುಖ ಏಕತಾನವಿಲ್ಲದ ಈ ಕೃತಿಯಲ್ಲಿ ಅನುಭವಗಳು ಒಂದು ದಿಕ್ಕಿಗೆ ಹರಿಯದೆ ಎಲ್ಲ ದಿಕ್ಕುಗಳಿಗೂ ವಿಸ್ತರಿಸುತ್ತದೆ. ಮಹಾನದಿ ನೈಲ್ : ನೈಲ್ ನದಿ ಉಗಮದ ಸಾಹಸ ಯಾತ್ರೆಯ ನೆವದಲ್ಲಿ ಅದು ಇಡೀ ಆಫ್ರಿಕಾ ಖಂಡದ ಅಂತರಂಗವನ್ನು ಬೆಚ್ಚಿಬೀಳಿಸುವಂತೆ ಬಿಚ್ಚಿಡುತ್ತದೆ. ಆಫ್ರಿಕಾದ ವಿಸ್ಮಯಕರ ವ್ಯಕ್ತಿತ್ವ, ಅದರ ಮಾಂತ್ರಿಕ ಆಕರ್ಷಣೆ, ಅದರ ಭಯಜನಕ ಕಗ್ಗತ್ತಲು, ನೈಲ್ ನದಿಯಲ್ಲಿ ಲೀನವಾಗಿ ಹರಿಯುತ್ತಿರುವುದು ಅದಕ್ಕಾಗಿ ಪ್ರಾಣಾರ್ಪಣೆ ಮಾಡಿದ ಧೀರರೊಂದಿಗೇ ಓದುಗರಿಗೂ ಅನುಭವಗಮ್ಯವಾಗುತ್ತದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ.

uploads/authorimages/545.jpg
ಲೇಖಕರ ಇತರ ಕೃತಿಗಳು
10%
ರುದ್ರಪ್ರಯಾಗದ ಭಯಾನಕ ನರಭಕ್ಷಕ
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 105    Rs. 95
Rs. 105    Rs. 95
Best Sellers
ಅಕ್ಬರ್ ಬೀರಬಲ್ ಕಥೆಗಳು (ಚಿತ್ರಗಳೊಂದಿಗೆ)
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 108/-   Rs. 120
ಇದು ಜೀವ ಇದುವೇ ಜೀವನ
ರವಿ ಬೆಳಗೆರೆ, Ravi Belagere
Rs. 180/-   Rs. 200
ಕನ್ನಡ ವ್ಯಾಕರಣ ಮತ್ತು ರಚನೆ
ಗೋಪಾಲಕೃಷ್ಣ ಉಡುಪ ಎನ್, Gopalakrishna Udupa N
Rs. 143/-   Rs. 150
ಗೌರ್ಮೆಂಟ್ ಬ್ರಾಹ್ಮಣ
ಅರವಿಂದ ಮಾಲಗತ್ತಿ, Aravinda Malagatti
Rs. 90/-   Rs. 100

Latest Books
ಇಂಗ್ಲಿಷನ್ನು ಪಳಗಿಸೋಣ
ಅಜಕ್ಕಳ ಗಿರೀಶ ಭಟ್ , Ajakkala Girisha Bhat
Rs. 122/-   Rs. 135
ಕುವೆಂಪು ಚಿತ್ರಸಂಪುಟ
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, Rashtrakavi Kuvempu Trust
Rs. 1250/-
Marriage Guidance for a Happy Marriage
Vithal C Prabhu
Rs. 171/-   Rs. 190
ಧ್ಯಾನದ ಪವಾಡ
ರ‍್ಯುಹೊ ಒಕಾವಾ, Ryuho Okawa
Rs. 122/-   Rs. 135


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.