|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಅದ್ಭುತ ಜೀವಾವಾಸ ಅಂಡಮಾನ್ : ಪ್ರಕೃತಿ ಪ್ರೇಮಿಯ ಪ್ರವಾಸ ಕಥನ
"ಜೀವ" ಸದಾ ಚೈತನ್ಯ ತುಂಬುವ ಅಂಶ. ನೈಸರ್ಗಿಕ ಸೌಂದರ್ಯದ ಮುಂದೆ ಮಾನವ ನಿರ್ಮಿತ ಕೃತಕ ಸೌಂದರ್ಯ ಸಾಟಿಯಾಗಲಾರದು. ಅಂತಹ ಒಂದು ಚೈತನ್ಯಪೂರ್ಣ ಅನುಭವವನ್ನು ನೀಡುವ ಅಂಡಮಾನನ್ನು ಅಣು ಅಣುವಾಗಿ ಅನುಭವಿಸಿ, ಕಣಕಣವಾಗಿ ಆನಂದಿಸಿದ ಅನುಭವಗಳು, ಮಾನವನ ವಿಕಾಸದ ಇತಿಹಾಸದ ಪಳೆಯುಳಿಕೆಗಳಾಗಿ ಉಳಿದಿರುವ "ಜರವಾ" ಗಳ ಭೇಟಿ ನಿಜಕ್ಕೂ ಮುದ ನೀಡುವ ಅನುಭವಗಳು. ಅಂಡಮಾನಿಗೆ ಪ್ರವಾಸ ಹೋಗಬಯಸುವವರು ಸ್ಪಲ್ವವಾದರೂ ಅಲ್ಲಿಯ ಜೀವಾವಾಸಗಳನ್ನು ತಿಳಿದುಕೊಂಡು ಹೊರಟರೆ ಖಂಡಿತವಾಗಿಯೂ ಅವರ ಪ್ರವಾಸ ಮತ್ತಷ್ಟು ಅರ್ಥಪೂರ್ಣವಾಗುತ್ತದೆ. ಅಂತಹ ಒಂದು ಕಿರು ಪರಿಚಯವನ್ನು ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿ ಅವರ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ.
|
ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿಯವರು ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ. ಇವರು ವಿಜ್ಞಾನ ಸಂವಹನಕ್ಕಾಗಿ ಇರುವ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ, ಸಂವಹನಕ್ಕಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪರಿಸರ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕøತರೂ ಹೌದು. ವಿಜ್ಞಾನದ ನೂರಾರು ಲೇಖನಗಳು, ಹಲವು ಪುಸ್ತಕಗಳು ಪ್ರಕಟಣೆಗೊಂಡಿವೆ. ನವಕರ್ನಾಟಕ ಪ್ರಕಾಶನದ "ವಿಜ್ಞಾನ ಸರಳ ಪರಿಚಯ" ಮಾಲೆಯ ಸಂಪಾದಕರಲ್ಲೊಬ್ಬರು.
|
|
| |
|
|
|
|
|
|
|
|
|