Items
0
Total
  0.00 
Welcome Guest.

 
Rs. 200    
10%
Rs. 180/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪಲ್ಲವ ಪ್ರಕಾಶನ, Pallava Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 226
ಪುಸ್ತಕದ ಗಾತ್ರ : 1/8 Demy Size
ISBN : 9789381920459
ಕೋಡ್ : 189387

ವರ್ತಮಾನದ ತನ್ನ ತಲ್ಲಣಗಳಿಗೆ ನೆನಪಿನ ಕೊಂಡಿಯನ್ನು ಬೆಸೆದು ಅದನ್ನು ಅನುಭವವಾಗಿಸಿಕೊಂಡು ಆ ಮೂಲಕ ತಾನೂ ತನ್ನ ಸುತ್ತಲಿನ ಜಗತ್ತೂ ಇರುವ ಪರಿಯನ್ನು ಅರ್ಥೈಸಿಕೊಳ್ಳಲು ಹೊರಡುವ ಕೆವೈಎನ್ ನಾಟಕಗಳ ನೋಟ ನೆಟ್ಟಿರುವುದು ನಾಳೆಯ ಕಡೆಗೆ. ಇತಿಹಾಸದುದ್ದಕ್ಕೂ ಹಾಸಿಕೊಂಡಿರುವ ಅರಿವುಗೇಡಿತನದಿಂದ ಆಗಿರುವ ಗಾಯಗಳಿಗೆ ‘ತಿಳಿವಿ’ನ ಮುಲಾಮನ್ನು ಹಚ್ಚಲು ಈ ನಾಟಕಗಳು ಪ್ರಯತ್ನಿಸುತ್ತವೆ. ಮನುಷ್ಯ ಕಳೆದುಕೊಂದಿರುವ ನೆಲ, ನೀರು ಮತ್ತು ಹೆಣ್ಣಿನ ಮಡಿಲುಗಳ ನಿರಂತರ ಹುಡುಕಾಟ ಇವುಗಳಲ್ಲಿವೆ. ಇವುಗಳ ಅಸ್ತಿತ್ವವನ್ನು ಅರಿಯುವುದೇ ಇವುಗಳನ್ನು ಪಡೆಯುವ ದಾರಿ. ಆದರೆ ಇವುಗಳಿಗಾಗಿ ಯುದ್ಧ ಮಾಡುವ, ಅಮಾಯಕರನ್ನು ಬಲಿಕೊಡೂವ ಅಹಂಕಾರದ ದಾರಿ ಹಿಡಿದಿರುವ ಮನುಷ್ಯನಿಗೆ ನೆಲ, ಜಲ, ಮತ್ತು ಹೆಣ್ಣೀನ ಕಣ್ಣನ್ನು ಹುಡುಕಿಕೊಡುವ ಕೆಲಸ ಮಾಡಲು ಈ ನಾಟಕಗಳು ಹಂಬಲಿಸುತ್ತಿವೆ.

ಈ ದಾರಿಗಳನ್ನು ಕಂಡುಕೊಳ್ಳಲು ಕೆವೈಎನ್ ಕನ್ನಡದ್ದೇ ಅರಿವಿನ ಜಗತ್ತಿನ ಮೊರೆ ಹೋಗುತ್ತಾರೆ. ಅದು ಪಂಪ, ಕುವೆಂಪು, ಜನಪದ, ತತ್ವಪದ ಯಾವುದೂ ಆದೀತು. ಹೀಗಾಗಿ ಅವರ ನಾಟಕಗಳು ಕೇವಲ ಮುರಿದು ಕಟ್ಟುವ ಕೆಲಸ ಮಾಡುತ್ತಿಲ್ಲ. ನಾವು ಹಿಡಿಯಬೇಕಾದ ಅರಿವಿನ ದಾರಿ ಯಾವುದಾಗಿರಬೇಕು ಎಂಬ ಸೂಚನೆಯನ್ನೂ ಅವು ನೀಡುತ್ತಿವೆ. ಹಾಗೆಂದ ಕೂಡಲೇ ಅವರು ಕನ್ನಡದಾಚೆಗಿನ ಲೋಕಗಳನ್ನು ನಿರಾಕರಿಸುತ್ತಿದ್ದಾರೆಂದಲ್ಲ. ಅವುಗಳನ್ನು ಕನ್ನಡದ ಕಣ್ಣಿನ ಮೂಲಕ ನೋಡುತ್ತಿದ್ದಾರೆಂದರ್ಥ. ಹೀಗಾಗಿ ಅವರಿಗೆ ಕಾಳಿದಾಸ ‘ನ್ಯಾಸ್ತನೆ’... ಎಂಬ ಈ ನೆಲದ ತೆಲುಗು ಹಾಡಿನ ಹಾದಿಯಲ್ಲಷ್ಟೇ ಸ್ಪಷ್ಟವಾಗಬಲ್ಲ. ಚಮ್ಮಾರ, ರಂಗಮ್ಮ, ಗಂಧರ್ವಕನ್ಯೆ,..ಯರು ಈ ಅರಿವಿನ ದಾರಿಯ ವಿಸ್ತರಣೆಗಳು.

ಅನಭಿಜ್ಞ ಶಾಕುಂತಲದ ಒಂದು ಮಾತು ಹೀಗಿದೆ: “ತಾನಲ್ಲದ್ದನ್ನು ಮಾತ್ರ ಮನುಷ್ಯ ಪ್ರೀತಿಸಬಲ್ಲ”. ತನ್ನನ್ನಷ್ಟೇ ಪ್ರೀತಿಸಿಕೊಳ್ಳುವ ರೋಗಕ್ಕೆ ತುತ್ತಾಗಿರುವ ನಮ್ಮ ಕಾಲಕ್ಕೆ ಈ ಮಾತು ನಾಟಬೇಕಾಗಿದೆ. ಈ ಸಂಕಲನದಲ್ಲಿ ಸೇರಿರುವ ಎಲ್ಲ ಬರಹಗಳೂ ಈ ತಿಳಿವಿನ ಸೆಲೆಯಿಂದಲೇ ಹೊರಡುವುದೊಂದು ವಿಶೇಷ.

Best Sellers
ಪುಟಾಣಿಗಳಿಗಾಗಿ ಮೂಲಧಾತುಗಳ ಮಾಯಾಪ್ರಪಂಚ (ಸ್ವ-ಪರಿಚಯ)
ವಾಣಿಶ್ರೀ ಎಸ್, Vanishree S
Rs. 117/-   Rs. 130
ಮಕ್ಕಳಿಗಾಗಿ ತೆನಾಲಿ ರಾಮಕೃಷ್ಣನ ಕಥೆಗಳು
ಮಲ್ಲಿಕಾರ್ಜುನ ಹುಲಗಬಾಳೆ,Mallikarjuna Hulagabale
Rs. 36/-   Rs. 40
ಡಾ. ಜಿ. ಎಸ್. ಶಿವರುದ್ರಪ್ಪ ಪ್ರಾಯೋಗಿಕ ವಿಮರ್ಶೆ
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್, Lakshminarayana Bhat N S
Rs. 162/-   Rs. 180
ಚಿಕ್ಕಪ್ಪ - ಕಾದಂಬರಿ
ಜೋಗಿ, Jogi
Rs. 108/-   Rs. 120

Latest Books
ಚಾಣಕ್ಯ : ಇತಿಹಾಸದ ಒಂದು ಮಹಾನ್ ವ್ಯಕ್ತಿತ್ವ
ಶ್ರೀಧರಮೂರ್ತಿ ಎನ್ ಎಸ್, Sridharmurthy N S
Rs. 54/-   Rs. 60
ಗೆರೆಮಿರಿವ ಚಿನ್ನದದಿರು : ಗೋಪಾಲಕೃಷ್ಣ ಅಡಿಗ ಒಂದು ಪ್ರವೇಶ
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 15/-
ನಡೆದಾಟ
ರಾಹುಲ್ ದಯಾಳು, Rahul Dayalu
Rs. 135/-   Rs. 150
ಚಲನಾ ಕೌಶಲಗಳು (ಸಮಗ್ರ ಮತ್ತು ಸೂಕ್ಷ್ಮ) ಮತ್ತು ದೈನಂದಿನ ಚಟುವಟಿಕೆಗಳು 2
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 315/-   Rs. 350


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.